ಸಂತೂರ್ ಕಲಾವಿದ ಸೊಪೊರಿ ಇನ್ನಿಲ್ಲ

Update: 2022-06-02 18:25 GMT

ಹೊಸದಿಲ್ಲಿ, ಜೂ.2: ಖ್ಯಾತ ಸಂತೂರ್ ವಾದಕ ಭಜನ್ ಸೊಪೊರಿ ಅವರು ಗುರುವಾರ ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.73 ವರ್ಷದ ಸೊಪೊರಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಜನ್ ಸೊಪೊರಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಭಜನ್ ಸೊಪೊರಿ ಅವರು 1948ರಲ್ಲಿ ಶ್ರೀನಗರದಲ್ಲಿ ಜನಿಸಿದ್ದರು. ಸಂತೂರ್ ಕಲಾವಿದರಾಗಿ ಭಜನ್ ಸೊಪೊರಿ ಅವರು 2004ರಲ್ಲಿ ಪದ್ಮಶ್ರೀ ಸೇರಿದಂತೆ ಹವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 1992ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ದೊರೆತಿತ್ತು. 2016ರಲ್ಲಿ ಅವರಿಗೆ ಜಮ್ಮುಕಾಶ್ಮೀರ ಸರಕಾರವು ಅವರಿಗೆ ಜೀವಿತಾವಧಿ ಸಾಧನೆ ಪುರಸ್ಕಾರ ನೀಡಿ ಗೌರವಿಸಿತ್ತು. ಉತ್ಕಲ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಸಂತೂರ್ ವಾದನದಲ್ಲಿ ಅವರ ಸಾಧನೆಯನ್ನು ಗುರುತಿಸಿ ಈಜಿಪ್ಟ್ ಅವರಿಗೆ ಧ್ವಜ ಗೌರವವನ್ನು ಪ್ರದಾನ ಮಾಡಿತ್ತು. ಶಾಸ್ತ್ರೀಯ ಸಂಗೀತಕ್ಕೆ ಉತ್ತೇಜನ ನೀಡಲು ಅವರು ಸಂಗೀತ ಹಾಗೂ ಪ್ರದರ್ಶನ ಕಲೆಗಾಗಿನ ಸೊಪೊರಿ ಅಕಾಡಮಿ (ಸಮಪ)ಯನ್ನು ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News