ದಿಲ್ಲಿ ವಿಮಾನ ನಿಲ್ದಾಣದ ಕಾರ್ಗೋ ಬೇನಲ್ಲಿ ಬೆಂಕಿ ಆಕಸ್ಮಿಕ

Update: 2022-06-04 18:09 GMT

ಹೊಸದಿಲ್ಲಿ, ಜೂ.4: ದಿಲ್ಲಿ ವಿಮಾನನಿಲ್ದಾಣದ ಕಾರ್ಗೋ ಬೇ (ಸರಕು ವಿಲೇವಾರಿ ವಿಭಾಗ)ದಲ್ಲಿ ಶುಕ್ರವಾರ ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಒಂದು ಟೋವಿಂಗ್ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ.

ಸಂಜೆ 5:25ರ ವೇಳೆಗೆ, ಕಾರ್ಗೊ ಬೇ ಸಂಖ್ಯೆ 262ರ ಸಮೀಪ ಟೋವಿಂಗ್ ವಾಹನಕ್ಕೆ ಬೆಂಕಿ ಹತ್ತಿಕೊಂಡಿರುವುದು ಗಮನಕ್ಕೆ ಬಂದಿರುವುದಾಗಿ ವಿಮಾನನಿಲ್ದಾಣದ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆಯ ಆನಂತರ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದ್ದು, ಕೂಡಲೇ ಬೆಂಕಿಯನ್ನು ಸಂಪೂರ್ಣವಾಗಿ ಶಮನಗೊಳಿಸಲಾಯಿತೆಂದು ವಿಮಾನನಿಲ್ದಾಣದ ಮೂಲಗಳು ತಿಳಿಸಿವೆ.

ಘಟನೆ ನಡೆದ ಸಂದರ್ಭಲ್ಲಿ ಹಲವಾರು ಪ್ರಯಾಣಿಕ ವಿಮಾನಗಳು ಸರಕುಗಳನ್ನು ಲೋಡ್ ಮಾಡುತ್ತಿದ್ದವು. ಆದರೆ ಅವುಗಳಿಗೆ ಯಾವುದೇ ಹಾನಿಯುಂಟಾಗಿಲ್ಲವೆಂದು ವದಿಗಳು ತಿಳಿಸಿವೆ. ಘಟನೆಯ ಬಗ್ಗೆ ಸರಕು ಸಾಗಣೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಆಂತರಿಕ ತನಿಖೆಗೆ ಆದೇಶಿಸಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News