ಕತರ್ ಬಳಿಕ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ ಕುವೈಟ್

Update: 2022-06-05 17:01 GMT

ಹೊಸದಿಲ್ಲಿ,ಜೂ.5: ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿ ನಾಯಕಿ ನೂಪುರ ಶರ್ಮಾ ವಿರುದ್ಧ ಅರಬ್ ದೇಶಗಳು ತೀವ್ರ ಆಕ್ರೋಶಗೊಂಡಿವೆ. ಕತರ್ ಬಳಿಕ ಕುವೈತ್ ಸರಕಾರವು ರವಿವಾರ ಭಾರತದ ರಾಯಭಾರಿಯನ್ನು ಕರೆಸಿಕೊಂಡು ಶರ್ಮಾ ವಿರುದ್ಧ ಸಂಪೂರ್ಣ ತಿರಸ್ಕಾರವನ್ನು ವ್ಯಕ್ತಪಡಿಸಿತಲ್ಲದೆ,ಅಧಿಕೃತ ದೂರು ಪತ್ರವನ್ನೂ ನೀಡಿತು.

ಕುವೈತ್ ಸರಕಾರವು ಭಾರತೀಯ ರಾಯಭಾರಿಯನ್ನು ಕರೆಸಿಕೊಂಡು ತನ್ನ ಅನುಚಿತ ಹೇಳಿಕೆಯಿಂದ ಮುಸ್ಲಿಮ್ ಜಗತ್ತಿನಲ್ಲಿ ಆಕ್ರೋಶವನ್ನು ಸೃಷ್ಟಿಸಿರುವ ಶರ್ಮಾ ವಿರುದ್ಧ ಅಧಿಕೃತ ದೂರನ್ನು ಸಲ್ಲಿಸಿದೆ. ಶರ್ಮಾರ ಹೇಳಿಕೆಗಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವ ಬಿಜೆಪಿಯ ನಿರ್ಧಾರವನ್ನು ಕುವೈತ್ ಸರಕಾರವು ಪ್ರಶಂಸಿಸಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News