76,390 ಕೋ.ರೂ. ದೇಶಿ ನಿರ್ಮಿತ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ ‌

Update: 2022-06-06 18:21 GMT

ಹೊಸದಿಲ್ಲಿ, ಜೂ. 6: ದೇಶದ ಕೈಗಾರಿಕೆಗಳಿಂದ 76,390 ಕೋ. ರೂ. ಸೇನಾ ಸಲಕರಣೆ ಹಾಗೂ ಪ್ಲಾಟ್ಫಾರ್ಮ್ಗಳ ಖರೀದಿಗೆ ರಕ್ಷಣಾ ಸಚಿವಾಲಯ ಸೋಮವಾರ ಅನುಮತಿ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಈ ಖರೀದಿ ಪ್ರಸ್ತಾವಕ್ಕೆ ಅನುಮತಿ ನೀಡಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತೀಯ ನೌಕಾಪಡೆಗೆ ಮುಂದಿನ ತಲೆಮಾರಿನ ಸುಮಾರು 36,000 ಕೋ. ರೂ. ಅಂದಾಜು ವೆಚ್ಚದ ಕಾರ್ವೆಟ್ಸ್ (ಎನ್ಜಿಸಿಗಳು)ಗಳನ್ನು ಖರೀದಿಸಲು ಡಿಎಸಿ ಅನುಮತಿ ನೀಡಿದೆ. ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್ಎಎಲ್)ನಿಂದ ಡೋರ್ನಿಯರ್ ವಿಮಾನ ಹಾಗೂ ಎಸ್ಯು-30 ಎಂಕೆಐ ಏರೋ-ಎಜಿನ್ಗಳ ಉತ್ಪಾದನೆ ದೇಶೀಕರಣವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಇದಲ್ಲದೆ, ಭಾರತೀಯ ಸೇನೆಗೆ ಹಲವು ಸಲಕರಣೆಗೆ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಅನುಮತಿ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News