ಮಿಥಾಲಿ ರಾಜ್‌ಗೆ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದ ಕ್ರಿಕೆಟ್ ದಿಗ್ಗಜರು

Update: 2022-06-09 05:55 GMT
ಮಿಥಾಲಿ ರಾಜ್ (PTI)

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಭಾರತ ಮಹಿಳಾ ಕ್ರಿಕೆಟ್ ನ ದಿಗ್ಗಜೆ ಮಿಥಾಲಿ ರಾಜ್ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತಾದರೂ ಪ್ರತಿಯೊಬ್ಬರು ಮುಂದಿನ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸುತ್ತಿದ್ದಾರೆ. 

ಮೂಲತಃ ರಾಜಸ್ಥಾನದವರಾದ ಮಿಥಾಲಿ 23 ವರ್ಷದ ಸುದೀರ್ಘ ಅದ್ಭುತ ಪಯಣಕ್ಕೆ ವಿದಾಯ ಹೇಳಿದ್ದಾರೆ. ಜೊತೆಗೆ ಅವರ ಪಯಣದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ನೆಟ್ಟಿಗರು ಮೆಲುಕು ಹಾಕಿದ್ದಾರೆ. 

ಕ್ರಿಕೆಟಿಗ ರಾಬಿನ್ ಉತ್ತಮ ಶುಭ ಹಾರೈಸಿದ್ದು, ನಿವೃತ್ತಿಯ ಶುಭಾಶಯಗಳು ಮಿಥಾಲಿ ರಾಜ್ ನಿಮ್ಮನ್ನು ನೀಲಿ ಜೆರ್ಸಿಯಲ್ಲಿ ಆಡುವುದನ್ನು ನೋಡುವುದು ಗೌರವ. ನಿಮ್ಮ ಎಲ್ಲಾ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಹೇಳಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಕಲೆ ಹಾಕಿದ ಇತಿಹಾಸ ನಿರ್ಮಿಸಿರುವ ಇವರಿಗೆ ಕ್ರಿಕೆಟಿಗ ಪ್ರಜ್ಞಾನ ಓಜಾ ಅವರು, ಮಿಥಾಲಿರಾಜ್ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು! ನೀವು ಚಿಕ್ಕ ಮಕ್ಕಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಧನ್ಯವಾದಗಳು ಎಂದು ಹೇಳಿದ್ದಾರೆ. 

ಚೇತೇಶ್ವರ ಪೂಜಾರಿ ಅವರು, ಇದು ಎಂತಹ ಅದ್ಭುತ ವೃತ್ತಿಜೀವನವಾಗಿದೆ. ಮಿಥಾಲಿ ನೀವು ಅನೇಕರಿಗೆ ಸ್ಫೂರ್ತಿ! ನಿಮ್ಮ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ. ಧನ್ಯವಾದಗಳು ಮಿಥಾಲಿ ರಾಜ್ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News