ಭಾರತದ ಗತಕಾಲದ ವೈಭವವನ್ನು ಹೊಸ ತಲೆಮಾರಿನ ಮುಂದಿಡಿ: ಇತಿಹಾಸತಜ್ಞರಿಗೆ ಅಮಿತ್ ಶಾ ಕರೆ

Update: 2022-06-10 17:59 GMT

ಹೊಸದಿಲ್ಲಿ, ಜೂ.10: ಇತಿಹಾಸತಜ್ಞರು ವರ್ತಮಾನ ಕಾಲದ ಹಿತದೃಷ್ಟಿಯಿಂದ ಭಾರತದ ಗತಕಾಲದ ವೈಭವವನ್ನು ಪುನರುಜ್ಜೀವನಗೊಳಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ದೇಶದ ಇತಿಹಾಸತಜ್ಞರಿಗೆ ಮನವಿ ಮಾಡಿದ್ದಾರೆ. ಇದು ದೇಶದ ಭವ್ಯ ಭವಿಷ್ಯತ್ತಿನ ನಿರ್ಮಾಣಕ್ಕೆ ನೆರವಾಗಲಿದೆ ಎಂದವರು ಅಭಿಪ್ರಾಯಿಸಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಎನ್‌ಟಿ ವೈದ್ಯ ಹಾಗೂ ಸಾಹಿತಿ ಒಮೇಂದ್ರ ರತ್ನು ಬರೆದಿರುವ ಮಹಾರಾಣಾಸ್: ಎ ಥೌಸಂಡ್ ಇಯರ್ ವಾರ್ ಫಾರ್ ಧರ್ಮ’ ಪುಸ್ತಕ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಮೇವಾಡದ ಸಿಸೋಡಿಯಾ ರಾಜಮನೆತನದ ಕುರಿತ ವಾಸ್ತವಗಳನ್ನು ಈ ಸಾಹಿತ್ಯ ಕೃತಿಯು ಅನಾವರಣಗೊಳಿಸಲಿದೆ ಎಂದು ಶಾ ಹಾರೈಸಿದರು. ‘ ಭಾರತಾದ್ಯಂತ ನಡೆದಿರುವ ಐತಿಹಾಸಿಕ ಹೋರಾಟಗಳ ಬಗ್ಗೆ ಬರೆಯುವಂತೆ ಅವರು ಲೇಖಕ ಓಮೇಂದ್ರ ರ್ನು ಅವರಿಗೆ ಸಲಹೆ ನೀಡಿದರು ಹಾಗೂ ಭಾರತದ ಗತಕಾಲದ ವೈಭವವನ್ನು ಅಗೆದು, ಹೊರತೆಗೆಯಬೇಕಾಗಿದೆ. ಹಾಗೆ ಮಾಡುವುದರಿಂದ ಈವರೆಗೆ ಹೊರಹೊಮ್ಮಿರದ ವಾಸ್ತವ ಸಂಗತಿಗಳನ್ನು ಹೊಸತಲೆಮಾರಿನ ಜನತೆ ತಿಳಿದುಕೊಳ್ಳುವಂತಾಗಲಿದೆ ಎಂದರು.

ಈ ಪುಸ್ತಕ ಕೃತಿಯು ತಮ್ಮ ಪ್ರಾಣವನ್ನೇ ಬಲಿಗೊಟ್ಟು ಆಕ್ರಮಣಕಾರರಿಂದ ದೇಶವನನು ರಕ್ಷಿಸಿದ ಸಿಸೋಡಿಯಾ ರಾಜವಂಶ ಹಾಗೂ ಮೇವಾಡದ ಮಹಾರಾಣಾರ ವೈಭವವನ್ನು ಈ ಪುಸ್ತಕ ಕೃತಿಯು ಪರಿಚಯಿಸಲಿದೆ ಎಂದು ಗೃಹಸಚಿವರು ಹೇಳಿದರು.

ಇತಿಹಾಸವು ಸರಕಾರವನ್ನು ಆಧರಿಸಿರುವುದಿಲ್ಲ ಎಂದು ಹೇಳಿದ ಗೃಹಸಚಿವರು, ಒಂದು ವೇಳೆ ಇತಿಹಾಸತಜ್ಞರು ಈವರೆಗೆ ಇತಿಹಾಸದಲ್ಲಿ ಸೂಕ್ತವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗದ ಕುರಿತು ವಾಸ್ತವ ವಿಷಯಗಳನ್ನು ಬರೆಯಲು ಆರಂಭಿಸಿದಾಗಲಷ್ಟೇ ಸತ್ಯವು ಅನಾವರಣಗೊಳ್ಳುತ್ತದೆ ಎಂದು ಅಮಿತ್ ಶಾ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News