ಜೂ.26ರಿಂದ 28:ಜರ್ಮನಿ,ಯುಎಇಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ

Update: 2022-06-22 15:02 GMT
 PHOTO: PTI

ಹೊಸದಿಲ್ಲಿ,ಜೂ.22: ಪ್ರಧಾನಿ ನರೇಂದ್ರ ಮೋದಿಯವರು ರವಿವಾರದಿಂದ ಜರ್ಮನಿ ಮತ್ತು ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ಗಳಿಗೆ ಮೂರು ದಿನಗಳ ಭೇಟಿಯನ್ನು ನೀಡಲಿದ್ದಾರೆ.

ಜರ್ಮನಿಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಗಾಗಿ ಜರ್ಮನ್ ಚಾನ್ಸಲರ್ ಓಲಾಫ್ ಶೋಲ್ಸ್ ಅವರ ಆಹ್ವಾನದ ಮೇರೆಗೆ ಪ್ರಧಾನಿಯವರು ಜೂ.26 ಮತ್ತು 27ರಂದು ಜರ್ಮನಿಯ ಶ್ಲಾಸ್ ಎಲ್ಮಾವುಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. 

ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಜೂ.28ರಂದು ಪ್ರಧಾನಿಯವರು ಮಾಜಿ ಯುಎಇ ಅಧ್ಯಕ್ಷ ಹಾಗೂ ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ತನ್ನ ವೈಯಕ್ತಿಕ ಸಂತಾಪಗಳನ್ನು ಸೂಚಿಸಲು ಯುಎಇಗೆ ಪ್ರಯಾಣಿಸಲಿದ್ದಾರೆ ಎಂದು ಸಚಿವಾಲಯವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News