ಭಾರತದಲ್ಲಿ ಕಾಂಗ್ರೆಸ್ ಆತ್ಮಹತ್ಯೆಯ ಹಾದಿ ಹಿಡಿದಿದೆಯೇ?

Update: 2022-06-25 05:31 GMT

ಜೈರಾಮ್ ರಮೇಶ್ ಮತ್ತು ಪಿ. ಚಿದಂಬರಂ ಅವರು ಪಕ್ಷದ ಭವಿಷ್ಯದ ಬಗ್ಗೆ ನಿಜವಾಗಿಯೂ ಗಂಭೀರ ಚಿಂತನೆ ಮಾಡುತ್ತಿದ್ದರೆ ಈ ಮರುನಾಮಕರಣ ಯಾಕೆ? ಇಂತಹ ದುರ್ಬಲ ರಚನೆಯ ಪಕ್ಷದಲ್ಲಿ ಏನನ್ನೂ ಪಡೆಯುವ ಸಾಮರ್ಥ್ಯ ಇವರಲ್ಲಿದೆ. ತಾವು ಬದಿಗೆ ನಿಂತು, ತಳಮೂಲದ ಸಂಪರ್ಕವಿರುವ ಇಬ್ಬರು ಯುವ ಮುಖಗಳಿಗೆ ಇವರು ಅವಕಾಶ ನೀಡಬಹುದಿತ್ತು. ಜಾತಿ ಎಂಬುದು ಸಾಂಸ್ಥಿಕ ವಾಸ್ತವತೆ ಎಂಬುದನ್ನು ಅವರು ಅರಿತಿಲ್ಲ. ಆದರೆ ಬಿಜೆಪಿ ಅರಿತುಕೊಂಡಿದೆ ಮತ್ತು ಜನತೆ ಸ್ಪಂದಿಸುತ್ತಿದ್ದಾರೆ. ಹೆಚ್ಚಿನ ಶಿಕ್ಷಣ ಎಂಬುದು ಮುಖಂಡರನ್ನು ಸಾಮಾಜಿಕ ವಾಸ್ತವತೆಯತ್ತ ಕುರುಡರನ್ನಾಗಿಸುವಂತೆ ಕಾಣುತ್ತದೆ. ಅವರ ಬರಹಗಳು ಅವರ ಜಾತಿ ಕುರುಡು ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ ಮತ್ತು ಇದು ಪಕ್ಷದ ಪುನರುತ್ಥಾನಕ್ಕೆ ಎಂದಿಗೂ ನೆರವಾಗದು.

     ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಹೆಜ್ಜೆಗಳು ನಮಗೆ ಲೆನಿನ್ ಅವರ ಪ್ರಸಿದ್ಧ ಮಾತನ್ನು ನೆನಪಿಸುತ್ತವೆ ‘ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದಕ್ಕೆ’- ಪ್ರತಿಕೂಲವಾದ ರಾಜಕೀಯ ವಾತಾವರಣದಲ್ಲಿ ಪ್ರಗತಿಪರ ಕಾರ್ಯತಂತ್ರದೊಂದಿಗೆ ಹಿಮ್ಮೆಟ್ಟುವ ಮತ್ತು ಮುನ್ನಡೆಯುವ ಯುದ್ಧತಂತ್ರದ ಅರ್ಥದಲ್ಲಿ ಅಲ್ಲ, ಆದರೆ ಕಣ್ಮುಚ್ಚಿದ ದೃಷ್ಟಿಯೊಂದಿಗೆ ಹೆಚ್ಚು ಸ್ಥಿರವಾದ ರೀತಿಯಲ್ಲಿ ಹಿಮ್ಮೆಟ್ಟುವುದು. 1970ರ ದಶಕದಲ್ಲಿ ಜೆಪಿ ಚಳವಳಿ, ತುರ್ತು ಪರಿಸ್ಥಿತಿ ಮತ್ತು ಪಕ್ಷವನ್ನು ಪದಚ್ಯುತಗೊಳಿಸಿದ ಜನತಾ ಪಕ್ಷದ ರಚನೆಗಿಂತಲೂ ಈಗಿನ ಬಿಕ್ಕಟ್ಟು ದೊಡ್ಡದಾಗಿದೆ. 2014ರಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಾಯಕತ್ವದಲ್ಲಿ ಬಿಜೆಪಿಯ ಏಳ್ಗೆಯು ಹಲವು ದಶಕಗಳಿಂದ ಚಳವಳಿಗಳನ್ನು ನಡೆಸಿದ ಮತ್ತು ಆಡಳಿತ ನಡೆಸಿದ ಅನುಭವದ ದೊಡ್ಡ ಇತಿಹಾಸವುಳ್ಳ ‘ಗ್ರ್ಯಾಂಡ್ ಓಲ್ಡ್ ಪಾರ್ಟಿ’ (ಮಹೋನ್ನತ ಹಳೆಯ ಪಕ್ಷಕ್ಕೆ) ಅತ್ಯಂತ ಕಷ್ಟಕರ ಮತ್ತು ಪ್ರತಿಕೂಲ ರಾಜಕೀಯ ವಾತಾವರಣವನ್ನು ಸೃಷ್ಟಿಸಿತು. ಒಂದರ ನಂತರ ಒಂದರಂತೆ ಅನಿರೀಕ್ಷಿತ ತಿರುವುಗಳನ್ನು ಎದುರಿಸುವ ರಾಜಕೀಯ ಸ್ಥೈರ್ಯ ಮತ್ತು ಸಾಮರ್ಥ್ಯಗಳನ್ನು ಉನ್ನತ ನಾಯಕತ್ವ ಹೊಂದಿಲ್ಲ ಎಂದು ತೋರುತ್ತದೆ. ಅದರ ಬಹುತೇಕ ಹಳೆಯ ಉನ್ನತ ಮುಖಂಡರು, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ಪಿ. ಚಿದಂಬರಂ ಮುಂತಾದವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಜನಸಂಘಟನೆ ಅಥವಾ ಯಾವುದೇ ಆಂದೋಲನವನ್ನು ನಡೆಸಿದ ಅನುಭವವನ್ನು ಹೊಂದಿರಲಿಲ್ಲ. ಆದರೆ ಯುಪಿಎ ಅವಧಿಯಲ್ಲಿ ಅವರು 10 ವರ್ಷ ಅಧಿಕಾರ ನಿಯಂತ್ರಿಸಿದರು. ಪಿ.ವಿ. ನರಸಿಂಹ ರಾವ್ ಅವಧಿಯಲ್ಲೂ ಮನಮೋಹನ್ ಸಿಂಗ್ ಮತ್ತು ಚಿದಂಬರಂ ಅಧಿಕಾರದಲ್ಲಿದ್ದರು. ಆದರೆ ಅವರು ಯಾವುದೇ ತಳಮಟ್ಟದ ಅನುಭವ ಹೊಂದಿರಲಿಲ್ಲ ಮತ್ತು ಜನಸಂಘಟನೆಯಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ. ಮತ್ತೊಂದೆಡೆ, ಈಗಿನ ಬಿಜೆಪಿಯು ಸಂಘ ವ್ಯವಸ್ಥೆಯ ಋಣಾತ್ಮಕ ಸಿದ್ಧಾಂತದೊಂದಿಗೆ ತಳಮಟ್ಟದಲ್ಲಿ ಕೆಲಸ ಮಾಡಿದ ಅನೇಕರನ್ನು ಹೊಂದಿದೆ. ಕಾಂಗ್ರೆಸ್ ಶೇ. 50ಕ್ಕಿಂತ ಕಡಿಮೆ ಮತಗಳನ್ನು ಪಡೆದರೂ ಅತ್ಯಧಿಕ ಸ್ಥಾನಗಳನ್ನು ಹೊಂದಿತ್ತು. 2004 ಮತ್ತು 2009ರಲ್ಲಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿಯವರ ಅಡಿಯಲ್ಲಿ ದುರ್ಬಲ ಬಿಜೆಪಿಯಿಂದಾಗಿ(ಇವರು ಜಾತಿಯ ಪ್ರಶ್ನೆಯ ಬಗ್ಗೆ ಯೋಚಿಸಲಿಲ್ಲ). ಜಾತಿಯ ಬಗ್ಗೆ ಚರ್ಚೆ ನಕಾರಾತ್ಮಕ ಮತ್ತು ಹಾನಿಕರ ಎಂದವರು ಅಭಿಪ್ರಾಯಪಟ್ಟರು. ಆದರೆ ಈಗ ಈ ಭಾವನೆ ಬಿಜೆಪಿಯ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾಗಿದೆ. ಜಾತಿಯ ಕಾರ್ಡನ್ನು 2014ರ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ ಜಾಣ್ಮೆಯಿಂದ ಬಳಸಿತು ಮತ್ತು ಅದನ್ನು ಮುಂದುವರಿಸಿತು. ಸುಲಭವಾಗಿ ಪೂರ್ಣ ಬಹುಮತದೊಂದಿಗೆ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಿತು. ಬಿಜೆಪಿಯ ಮತಬಲದ ಬೆನ್ನೆಲುಬೆಂದು ಇತರ ಹಿಂದುಳಿದ ವರ್ಗ(ಒಬಿಸಿ)ದವರನ್ನು ಬಿಂಬಿಸಲಾಯಿತು. ಆದರೆ ಅವರ ಕೋಮುವಾದಿ ಅಜೆಂಡಾ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ನಿರಂತರವಾಗಿ ತೊಂದರೆಗೆ ಸಿಲುಕಿಸಿದೆ. ಇದು ನಕಾರಾತ್ಮಕವಾದ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಜಾಗತೀಕರಣದ ಆರ್ಥಿಕತೆಯಲ್ಲಿ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಯಿದೆ. ಇತ್ತೀಚಿನ ಮಸೀದಿ-ಮಂದಿರ ಸಮಸ್ಯೆಗಳಿಗೆ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ವಿಶ್ವದ ಪ್ರತಿಕ್ರಿಯೆ ಆರ್ಥಿಕತೆ ಮತ್ತು ಸಮಾಜವನ್ನು ಒಡೆಯುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕಾಂಗ್ರೆಸ್ ಈಗಲೂ ಕಣ್ಣುಮುಚ್ಚಿಕೊಂಡು ತನ್ನ ಒಬಿಸಿ-ವಿರೋಧಿ ನೀತಿಯ ಜಪದಲ್ಲೇ ಇರುವುದರಿಂದ 2024ರ ಚುನಾವಣೆಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ.

2024ರಲ್ಲಿ ಏನಾಗುವುದೋ ಎಂಬ ದೇಶದ ಆತಂಕ ಎಲ್ಲೆಡೆ ಕಂಡು ಬರುತ್ತಿದೆ. ಆದರೆ ಹಲವಾರು ದಶಕಗಳ ಕಾಲ ರಾಜ್ಯಸಭೆಯ ಮೂಲಕ ದೇಶವನ್ನು ಆಳಿದ ಕಾಂಗ್ರೆಸ್‌ನ ಬುದ್ಧಿಜೀವಿ ನಾಯಕರಿಗೆ ಆತಂಕ ಕಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದಯಪುರದಲ್ಲಿ ಕಾಂಗ್ರೆಸ್ ಚಿಂತನ ಶಿಬಿರ ನಡೆಸಿದೆ. ಇದು ಕೆಲವು ಹೊಸ ಘೋಷಣೆಗಳೊಂದಿಗೆ ಸ್ವಲ್ಪಭರವಸೆ ಮೂಡಿಸಿದೆ. ಅದರಲ್ಲಿ ಸಾಮಾಜಿಕ ನ್ಯಾಯ, ಒಂದು ಕುಟುಂಬಕ್ಕೆ ಒಂದು ಹುದ್ದೆ ಮತ್ತು ರಾಜ್ಯಸಭೆಯ ನಾಮನಿರ್ದೇಶನದ ಮಿತಿ ಎರಡು ವರ್ಷ ಎಂಬ ಘೋಷಣೆ ಬಹಳ ಮಹತ್ವದ್ದಾಗಿದೆ. ಆದರೆ, ಕೆಲವೇ ದಿನಗಳಲ್ಲಿ ರಾಜ್ಯಸಭೆಗೆ 10 ನಾಮನಿರ್ದೇಶನಗಳು ಎಲ್ಲಾ ಮೂರು ಘೋಷಣೆಗಳನ್ನು ಉಲ್ಲಂಘಿಸಿರುವುದನ್ನು ತೋರಿಸಿದೆ. 10 ಸ್ಥಾನಗಳಲ್ಲಿ 7 ಸ್ಥಾನಗಳನ್ನು ದ್ವಿಜ(ಮೇಲಿನ) ಜಾತಿಗಳಿಗೆ ನೀಡಲಾಯಿತು. ಪಟ್ಟಿ ಈ ಕೆಳಗಿನಂತಿದೆ: 1. ಪಿ ಚಿದಂಬರಂ-ಶೆಟ್ಟಿಯಾರ್, ದ್ವಿಜ

2. ಜೈರಾಮ್ ರಮೇಶ್-ಬ್ರಾಹ್ಮಣ, ದ್ವಿಜ

3. ರಾಜೀವ್ ಶುಕ್ಲ-ಬ್ರಾಹ್ಮಣ, ದ್ವಿಜ

4. ಪ್ರಮೋದ್ ತಿವಾರಿ-ಬ್ರಾಹ್ಮಣ, ದ್ವಿಜ

5. ಅಜಯ್ ಮಾಕನ್-ಖಾತ್ರಿ, ದ್ವಿಜ

6. ವಿವೇಕ್ ತಂಖ-ಕಾಯಸ್ಥ, ದ್ವಿಜ.

7. ರಂಜೀತ್ ರಂಜನ್-ಖಾತ್ರಿ, ದ್ವಿಜ

8. ಇಮ್ರಾನ್ ಪ್ರತಾಪ್‌ಗಢಿ-ಮುಸ್ಲಿಮ್ 9. ರಣದೀಪ್ ಸುರ್ಜೆವಾಲಾ- ಜಾಟ್, ಮೇಲ್ವರ್ಗದ ಶೂದ್ರ

10. ಮುಕುಲ್ ವಾಸ್ನಿಕ್-ದಲಿತ

Vs  

ರಂಜೀತ್ ರಂಜನ್ ಪಪ್ಪುಯಾದವ್ ಪತ್ನಿಯಾಗಿರುವುದರಿಂದ ಅವರನ್ನು ಒಬಿಸಿ ಎಂದು ನಾವು ಪರಿಗಣಿಸಿದರೂ, 6 ಸ್ಥಾನಗಳನ್ನು ದ್ವಿಜರಿಗೆ ನೀಡಲಾಗಿದೆ. ಆದಾಗ್ಯೂ, ದೇಶದ ಯಾವುದೇ ಒಬಿಸಿ ವರ್ಗ ರಂಜೀತ್‌ರನ್ನು ತಮ್ಮ ಪ್ರತಿನಿಧಿ ಎಂದು ಪರಿಗಣಿಸುವುದಿಲ್ಲ. ಅದರ ಇಬ್ಬರು ಬೌದ್ಧಿಕ ಹಿರಿಯ ನಾಯಕರು ಉದಯ್‌ಪುರದ 2 ಘೋಷಣೆಗಳಾದ-ಒಂದು ಕುಟುಂಬ ಒಂದು ಹುದ್ದೆ ಮತ್ತು 2 ಅವಧಿಗೆ ರಾಜ್ಯಸಭಾ ನಾಮನಿರ್ದೇಶನವನ್ನು ಹೇಗೆ ಉಲ್ಲಂಘಿಸಿದ್ದಾರೆ ನೋಡಿ. ಜಾತಿ ವ್ಯವಸ್ಥೆಯ ಇತಿಹಾಸದ ಬಗ್ಗೆ ಯಾವುದೇ ತಿಳುವಳಿಕೆಯನ್ನು ತೋರಿಸದ ಜೈರಾಮ್ ರಮೇಶ್ ಅವರು ಸಾರ್ವಕಾಲಿಕ ರಾಜ್ಯಸಭಾ ಅರಸ ಮತ್ತು ಪಕ್ಷದ ಚಿರಪರಿಚಿತ ಬೌದ್ಧಿಕ ಮುಖ. ಬಿಜೆಪಿಯನ್ನು ಚೆಕ್-ಮೇಟ್ ಮಾಡಲು ಆಸಕ್ತಿ ತೋರದ ಅವರು ಮತ್ತೆ ರಾಜ್ಯಸಭಾ ಸದಸ್ಯರಾದರು. ತಾನು ಸದನದಲ್ಲಿ ಇರದಿದ್ದರೆ ಭಾರತೀಯ ಸಂಸತ್ತು ಕಾನೂನುಗಳನ್ನು ರಚಿಸಲು, ಅರ್ಥವ್ಯವಸ್ಥೆಯ ಚಿಂತನೆ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸುವ ಮುಖಂಡ ಚಿದಂಬರಂ. ಆದರೆ ಮೋದಿಯವರು ಹಲವು ಚುನಾವಣಾ ಪ್ರಚಾರ ಸಭೆಗಳಲ್ಲಿ ‘‘ಹಾರ್ವರ್ಡ್ ಅಲ್ಲ, ಹಾರ್ಡ್‌ವರ್ಕ್ ಭಾರತವನ್ನು ಆಳಬೇಕು’’ ಎಂದಿದ್ದರು. ಕೃಷಿ-ಕಾರ್ಮಿಕ ಶ್ರಮವರ್ಗದವರನ್ನು ಪ್ರತಿನಿಧಿಸುವ ಶೂದ್ರ/ಒಬಿಸಿಗಳು ಮೋದಿಯ ಮೇಲೆ ವಿಶ್ವಾಸ ಇರಿಸಿರುವಂತೆ ಕಾಣುತ್ತದೆ ಮತ್ತು ಅವರು ಚಿದಂಬರಂ ಇಂಗ್ಲಿಷ್ ಮಾಧ್ಯಮಗಳಲ್ಲಿ ಬರೆಯುವ ನಿರಂತರ ಅಂಕಣಗಳನ್ನು ಓದುವುದಿಲ್ಲ. ದಿಕ್ಕು ಸ್ಪಷ್ಟವಾಗಿದೆ. ಹಲವು ಒಬಿಸಿ ಯುವಜನತೆ ಈಗ ಹಾರ್ಡ್‌ವರ್ಕ್ ಹಾರ್ವರ್ಡ್‌ನ ಅರ್ಥ ತಿಳಿದುಕೊಂಡಿದ್ದಾರೆ. ಚಿದಂಬರಂ ಅವರ ಪುತ್ರನೂ ಈಗ ಸಂಸದನಾಗಿದ್ದು, ಆಗಾಗ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುವುದನ್ನು ಹೊರತುಪಡಿಸಿ ಸಂಸತ್‌ನಲ್ಲಿ ಯಾವುದೇ ಹೊಸ ಬುದ್ಧಿವಂತಿಕೆಯನ್ನು ಪ್ರದರ್ಶಿಸಿಲ್ಲ. ಅವರು ಪಕ್ಷದ ಭವಿಷ್ಯದ ಬಗ್ಗೆ ನಿಜವಾಗಿಯೂ ಗಂಭೀರ ಚಿಂತನೆ ಮಾಡುತ್ತಿದ್ದರೆ ಈ ಮರುನಾಮಕರಣ ಯಾಕೆ? ಇಂತಹ ದುರ್ಬಲ ರಚನೆಯ ಪಕ್ಷದಲ್ಲಿ ಏನನ್ನೂ ಪಡೆಯುವ ಸಾಮರ್ಥ್ಯ ಇವರಲ್ಲಿದೆ. ತಾವು ಬದಿಗೆ ನಿಂತು, ತಳಮೂಲದ ಸಂಪರ್ಕವಿರುವ ಇಬ್ಬರು ಯುವ ಮುಖಗಳಿಗೆ ಇವರು ಅವಕಾಶ ನೀಡಬಹುದಿತ್ತು. ಜಾತಿ ಎಂಬುದು ಸಾಂಸ್ಥಿಕ ವಾಸ್ತವತೆ ಎಂಬುದನ್ನು ಅವರು ಅರಿತಿಲ್ಲ. ಆದರೆ ಬಿಜೆಪಿ ಅರಿತುಕೊಂಡಿದೆ ಮತ್ತು ಜನತೆ ಸ್ಪಂದಿಸುತ್ತಿದ್ದಾರೆ. ಹೆಚ್ಚಿನ ಶಿಕ್ಷಣ ಎಂಬುದು ಮುಖಂಡರನ್ನು ಸಾಮಾಜಿಕ ವಾಸ್ತವತೆಯತ್ತ ಕುರುಡರನ್ನಾಗಿಸುವಂತೆ ಕಾಣುತ್ತದೆ. ಅವರ ಬರಹಗಳು ಅವರ ಜಾತಿ ಕುರುಡು ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ ಮತ್ತು ಇದು ಪಕ್ಷದ ಪುನರುತ್ಥಾನಕ್ಕೆ ಎಂದಿಗೂ ನೆರವಾಗದು.

ಚಿದಂಬರಂ ಗೃಹ ಮತ್ತು ವಿತ್ತ ಸಚಿವರಾಗಿದ್ದಾಗ ಕೈಗೊಂಡ ಹಲವು ನಿರ್ಧಾರಗಳನ್ನು ಈಗ ಬಿಜೆಪಿ ತನ್ನ ಪ್ರಯೋಜನಕ್ಕಾಗಿ ಬಳಸಿಕೊಳ್ಳುತ್ತಿದೆ. ಕೆ. ಚಂದ್ರಶೇಖರ ರಾವ್ ಉಪವಾಸ ಸತ್ಯಾಗ್ರಹ ಹೂಡಿದ್ದ ಸಂದರ್ಭದಲ್ಲಿ ತೆಲಂಗಾಣಕ್ಕೆ ರಾಜ್ಯದ ಸ್ಥಾನಮಾನ ನೀಡಲಿರುವುದಾಗಿ ಚಿದಂಬರಂ ಘೋಷಿಸಿದ್ದರು, ಇದು ಕೆಸಿಆರ್‌ಗೆ ವರದಾನವಾಯಿತು. ತೆಲಂಗಾಣದಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಅಧಿಕಾರ ಕಳೆದುಕೊಂಡಂತೆ ಭಾಸವಾಗುತ್ತಿದೆ. ಚಿದಂಬರಂ ಎಫ್‌ಸಿಆರ್‌ಎ(2010) ಕಾಯ್ದೆ (ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ)ಯಲ್ಲಿ ಬದಲಾವಣೆ ತಂದರು. ಈಗ ಬಿಜೆಪಿಯು ಅನೇಕ ಸಣ್ಣ ಉದ್ಯೋಗಿಗಳ ಜೀವನೋಪಾಯವನ್ನು ನಾಶಪಡಿಸುವ ಮೂಲಕ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ.

ತಾನೋರ್ವ ಒಬಿಸಿ ಚಾಯ್‌ವಾಲಾ ಎಂದು ಮೋದಿ ಪ್ರತಿಪಾದಿಸಿದ ಮತ್ತು ಒಬಿಸಿಗಳು ಹಾಗೂ ಕಾರ್ಮಿಕರನ್ನು ಸಜ್ಜುಗೊಳಿಸಿದ ಬಳಿಕ, ಅದುವರೆಗೆ ಬಿಜೆಪಿಗೆ ಮತ ಹಾಕದವರೂ 2014 ಮತ್ತು 2019ರಲ್ಲಿ ಬಿಜೆಪಿಗೆ ಮತ ಚಲಾಯಿಸಿದರು. 2024ರಲ್ಲೂ ಈ ಭವಿಷ್ಯ ಕಾಣುತ್ತದೆ.

ಇದೂ ಕಾಂಗ್ರೆಸ್‌ನ ಬೌದ್ಧಿಕ ರಾಜ್ಯಸಭಾ ಅರಸರನ್ನು ಮತ್ತು ಸಂಸದರನ್ನು ಎಚ್ಚರಿಸಲಿಲ್ಲ. ಬ್ರಾಹ್ಮಿಣ್-ಬನಿಯಾ ಪಕ್ಷ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿಯು ಈಗ ಅಧಿಕಾರದ ಸ್ಥಾನಗಳಿಗೆ ಹೆಚ್ಚೆಚ್ಚು ಶೂದ್ರ/ಒಬಿಸಿ/ದಲಿತರನ್ನು ನೇಮಿಸುವ ಮೂಲಕ ಬಹು ಜಾತೀಯ ಪಕ್ಷವಾಗಿ ಬದಲಾಗಿದೆ ಎಂಬುದನ್ನೂ ಅವರು ತಿಳಿದುಕೊಂಡಿಲ್ಲ. ಕಾಂಗ್ರೆಸ್ ಎಂದಿಗೂ ಒಬಿಸಿ ವರ್ಗದವರನ್ನು ಜೆಎನ್‌ಯುವಿನ ಉಪಕುಲಪತಿಯನ್ನಾಗಿ ಮಾಡಲಿಲ್ಲ. ಈಗ ಬಿಜೆಪಿಯು ಒಬಿಸಿ ವರ್ಗಕ್ಕೆ ಸೇರಿದ ಮಹಿಳೆಯನ್ನು ಪ್ರಥಮ ಬಾರಿಗೆ ಜೆಎನ್‌ಯು ಉಪಕುಲಪತಿಯನ್ನಾಗಿ ಮಾಡಿದೆ. ಯುವ ಶೂದ್ರ/ಒಬಿಸಿ ವಿದ್ಯಾರ್ಥಿಗಳ ಒಲವು ಗಿಟ್ಟಿಸಿಕೊಳ್ಳಲು ಇದು ಸಾಕಾಗದೇ? ಬಿಜೆಪಿಯ ಈಗಿನ ಸಂಪುಟ ಹಾಗೂ ರಾಜ್ಯ ಸಭಾ ಪಟ್ಟಿಯೂ ಹೊಸ ಜಾತಿ ಸಂಯೋಜನೆಯನ್ನು ತೋರಿಸುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ವ್ಯವಸ್ಥೆಯ ಚಾಲನೆಯ ಪ್ರಕ್ರಿಯೆಯಲ್ಲಿ ಹೊಸ ಸಾಮಾಜಿಕ ಶಕ್ತಿಗಳನ್ನು ಉತ್ತೇಜಿಸುವಲ್ಲಿ ಸ್ಪರ್ಧಿಸಬೇಕು. ಆದರೆ ಕಾಂಗ್ರೆಸ್ ಸ್ಪರ್ಧೆಗೆ ನಿರಾಕರಿಸುತ್ತಿದೆ. ರಾಜ್ಯಸಭೆಯ ಪಟ್ಟಿಯಲ್ಲಿ ಯಾವ ವೈವಿಧ್ಯತೆಯಿದೆ? ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಶೇ. 52ರಷ್ಟಿರುವ ಉತ್ಪಾದಕ ಜಾತಿಗಳು 10ರಲ್ಲಿ ಕೇವಲ 1 ಸ್ಥಾನವನ್ನು (ಸುರ್ಜೆವಾಲಾ, ಜಾಟ್) ಮಾತ್ರ ಪಡೆಯುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ನಾಯಕರು ಯಾವ ಜಾತ್ಯತೀತತೆಯನ್ನು ಬೋಧಿಸುತ್ತಾರೆ?

ಕೃಪೆ: countercurrents.org

Writer - ಕಾಂಚ ಐಲಯ್ಯ ಶೆಫರ್ಡ್

contributor

Editor - ಕಾಂಚ ಐಲಯ್ಯ ಶೆಫರ್ಡ್

contributor

Similar News