ಗೋವಾ: ಭಾರೀ ಮಳೆ, ರಸ್ತೆಗಳಲ್ಲಿ ನೆರೆ, ಸಂಚಾರಕ್ಕೆ ವ್ಯತ್ಯಯ
Update: 2022-07-04 16:16 GMT
ಪಣಐ,ಜು.4: ಸೋಮವಾರ ಬೆಳಿಗ್ಗೆ ಭಾರೀ ಮಳೆಯಿಂದಾಗಿ ಗೋವಾದ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿಗೆ ಸಮೀಪದ ಬಾಂಬೋಲಿಯಲ್ಲಿನ ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬಳಿ ನೆರೆ ನೀರು ನಿಂತಿದ್ದು,ರೋಗಿಗಳು ಮತ್ತು ಅವರ ಬಂಧುಗಳಿಗೆ ತೊಂದರೆಯಾಗಿದೆ. ಹಲವಾರು ಆ್ಯಂಬುಲೆನ್ಸ್ ಗಳು ನೆರೆನೀರಿನಲ್ಲಿ ಸ್ಥಗಿತಗೊಂಡಿವೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಪಣಜಿಯ ವಿವಿಧ ಭಾಗಗಳಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಮಳೆಯೊಂದಿಗೆ ಪ್ರತಿ ಗಂಟೆಗೆ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಐದು ದಿನಗಳ ಕಾಲ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.