​ವಿಧಾನಸಭೆಯಲ್ಲಿ ಭಾಷಣದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಏಕನಾಥ ಶಿಂದೆ

Update: 2022-07-04 16:28 GMT

ಮುಂಬೈ,ಜು.4: ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಗೆದ್ದ ಬಳಿಕ ಮುಖ್ಯಮಂತ್ರಿಯಾಗಿ ತನ್ನ ಮೊದಲ ಭಾಷಣ ಮಾಡಿದ ಏಕನಾಥ ಶಿಂದೆ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು.
ತನ್ನ ಬಂಡಾಯಕ್ಕಾಗಿ ತನ್ನ ಕುಟುಂಬಕ್ಕೆ ಬೆದರಿಕೆಗಳು ಬಂದಿದ್ದವು ಎಂದ ಶಿಂದೆ ಮೃತಪಟ್ಟಿರುವ ತನ್ನಿಬ್ಬರು ಮಕ್ಕಳನ್ನು ನೆನೆದುಕೊಂಡು ದುಃಖವನ್ನು ತಡೆಯದೆ ಉಮ್ಮಳಿಸಿದರು.
‘ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದ್ದರು. ನನ್ನ ತಂದೆ ಬದುಕಿದ್ದಾರೆ,ತಾಯಿ ಮೃತ ಪಟ್ಟಿದ್ದಾರೆ. ನಾನು ನನ್ನ ಹೆತ್ತವರಿಗೆ ಹೆಚ್ಚಿನ ಸಮಯ ನೀಡಲಾಗಲಿಲ್ಲ. ನಾನು ಮನೆಗೆ ಮರಳಿದಾಗ ಅವರು ಮಲಗಿರುತ್ತಿದ್ದರು,ನಾನು ಬೆಳಿಗ್ಗೆ ಮಲಗಿದ್ದಾಗ ಅವರು ಕೆಲಸಕ್ಕೆ ಹೋಗಿರುತ್ತಿದ್ದರು. ನನ್ನ ಮಗ ಶ್ರೀಕಾಂತನಿಗೆ ಹೆಚ್ಚು ಸಮಯ ನೀಡಲು ನನಗೆ ಸಾಧ್ಯವಾಗಿರಲಿಲ್ಲ. ನನ್ನ ಇಬ್ಬರು ಮಕ್ಕಳು ಮೃತಪಟ್ಟಾಗ ಶಿವಸೇನೆಯ ಹಿರಿಯ ನಾಯಕ ಆನಂದ ದಿೆ ನನಗೆ ಸಾಂತ್ವನ ಹೇಳಿದ್ದರು. ಬದುಕಿರುವುದರಲ್ಲಿ ಏನು ಅರ್ಥವಿದೆ ಎಂದು ನಾನು ಯೋಚಿಸುತ್ತಿದ್ದೆ. ಕಣ್ಣೀರನ್ನು ಒರೆಸಿಕೋ,ಇತರರ ಕಣ್ಣೀರನ್ನೂ ಒರೆಸು ಎಂದು ಹೇಳಿದ್ದ ದಿೆ ನಾನು ಚೇತರಿಸಿಕೊಳ್ಳಲು ನೆರವಾಗಿದ್ದರು ಮತ್ತು ವಿಧಾನಸಭೆಯಲ್ಲಿ ನನ್ನನ್ನು ಶಿವಸೇನೆ ನಾಯಕನನ್ನಾಗಿ ಮಾಡಿದ್ದರು’ ಎಂದು ಶಿಂದೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News