ಫೋನ್ ಕದ್ದಾಲಿಕೆ: ಮಾಜಿ ಮುಂಬೈ ಪೊಲೀಸ್ ಆಯುಕ್ತ,ಎನ್ಎಸ್ಇ ಮಾಜಿ ಮುಖ್ಯಸ್ಥರ ವಿರುದ್ಧ ಸಿಬಿಐನಿಂದ ಪ್ರಕರಣ

Update: 2022-07-08 15:07 GMT

ಹೊಸದಿಲ್ಲಿ,ಜು.8: ಕೋ-ಲೊಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಸ್ಟಾಕ್ ಎಕ್ಸಚೇಂಜ್ನ ನೌಕರರ ದೂರವಾಣಿಗಳನ್ನು ಕದ್ದಾಲಿಸಿದ ಆರೋಪದಲ್ಲಿ ಮಾಜಿ ಮುಂಬೈ ಪೊಲೀಸ್ ಆಯುಕ್ತ ಸಂಜಯ ಪಾಂಡೆ ಹಾಗೂ ಎನ್ಎಸ್ಇ ಮಾಜಿ ಮುಖ್ಯಸ್ಥರಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ ವಿರುದ್ಧ ಸಿಬಿಐ ಶುಕ್ರವಾರ ಹೊಸ ಪ್ರಕರಣವನ್ನು ದಾಖಲಿಸಿದೆ.

 ಕೋ-ಲೊಕೇಷನ್ ಹಗರಣದಲ್ಲಿ ಚಿತ್ರಾ ಮತ್ತು ರವಿ ನಾರಾಯಣ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಚಿತ್ರಾ ಮಾರ್ಚ್ನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪಾಂಡೆ 2001ರಲ್ಲಿ ಐಸೆಕ್ ಸೆಕ್ಯೂರಿಟಿಸ್ ಕಂಪನಿಯನ್ನು ಸ್ಥಾಪಿಸಿದ್ದು,ಇದನ್ನು ಎನ್ಎಸ್ಇ ನೌಕರರ ವಿದ್ಯುನ್ಮಾನ ಕಣ್ಗಾವಲಿಗೆ ಬಳಸಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶದ ಮೇರೆಗೆ ಹೊಸ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಂಡೆ ಆಸ್ತಿಗಳು ಸೇರಿದಂತೆ ಮುಂಬೈನ ಎಂಟು,ಪುಣೆಯ ಎರಡು,ರಾಷ್ಟ್ರ ರಾಜಧಾನಿ ಪ್ರದೇಶ (ಎನ್ಸಿಆರ್)ದ ಐದು ಹಾಗೂ ಲಕ್ನೋ,ಕೋಟಾ ಮತ್ತು ಚಂಡಿಗಡದ ತಲಾ ಒಂದು ಸ್ಥಳಗಳಲ್ಲಿ ಸಿಬಿಐ ತಂಡಗಳು ಶುಕ್ರವಾರ ಶೋಧ ಕಾರ್ಯಾಚರಣೆಗಳನ್ನು ನಡೆಸಿವೆ.
2010 ಮತ್ತು 2015ರ ನಡುವಿನ ಅವಧಿಯಲ್ಲಿ ಎನ್ಎಸ್ಇಯಲ್ಲಿ ಭದ್ರತಾ ಆಡಿಟ್ಗಳನ್ನು ನಡೆಸುವ ಹೊಣೆಯನ್ನು ವಹಿಸಿಕೊಂಡಿದ್ದ ಸಂಸ್ಥೆಗಳಲ್ಲಿ ಐಸೆಕ್ ಒಂದಾಗಿದ್ದು,ಇದೇ ಅವಧಿಯಲ್ಲಿ ಕೋ-ಲೊಕೇಷನ್ ಹಗರಣ ನಡೆದಿತ್ತು. ಎನ್ಎಸ್ಇಯ ಸರ್ವರ್ಗಳನ್ನು ಅಕ್ರಮವಾಗಿ ಪ್ರವೇಶಿಸಲಾಗುತ್ತಿದೆ ಎಂಬ ಬಗ್ಗೆ ಐಸೆಕ್ ಅದಕ್ಕೆ ಮಾಹಿತಿಯನ್ನು ನೀಡಿರಲಿಲ್ಲ ಎಂದು ಸಿಬಿಐ ಆರೋಪಿಸಿದೆ.

ಜು.5ರಂದು ಪಾಂಡೆ ಕೋ-ಲೊಕೇಷನ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಕೋನದಿಂದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದರು. ಪಾಂಡೆ ಜೂ.30ರಂದು ಪೊಲೀಸ್ ಆಯುಕ್ತರ ಹುದ್ದೆಯಿಂದ ನಿವೃತ್ತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News