ಬ್ರಿಟನ್ ಪ್ರಧಾನಿ ಹುದ್ದೆಗೆ ನಾನು ಪ್ರಬಲ ಆಕಾಂಕ್ಷಿ: ಭಾರತ ಮೂಲದ ಮಾಜಿ ಸಚಿವ ರಿಷಿ ಸುನಾಕ್

Update: 2022-07-12 13:25 GMT

ಹೊಸದಿಲ್ಲಿ,ಜು.8: ಬ್ರಿಟನ್ ಪ್ರಧಾನಿ ಹುದ್ದೆಗೆ ತಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಹಣಕಾಸು ಸಚಿವ,ಭಾರತ ಮೂಲದ ರಿಷಿ ಸುನಕ್ ಹೇಳಿದ್ದಾರೆ. ಗುರುವಾರ ಬೋರಿಸ್ ಜಾನ್ಸನ್ ಅವರು ರಾಜೀನಾಮೆ ನೀಡಿರುವುದರಿಂದ ಪ್ರಧಾನಿ ಹುದ್ದೆ ತೆರವಾಗಿದೆ.

 
‘ಯಾರಾದರೂ ಈ ಕ್ಷಣವನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕು. ಹೀಗಾಗಿಯೇ ನಾನು ಕನ್ಸರ್ವೇಟಿವ್ ಪಾರ್ಟಿಯ ಮುಂದಿನ ನಾಯಕನಾಗಲು ಮತ್ತು ನಿಮ್ಮ ಪ್ರಧಾನಿಯಾಗಲು ಸಜ್ಜಾಗಿದ್ದೇನೆ ’ಎಂದು ಸುನಕ್ ಶುಕ್ರವಾರ ಟ್ವಿಟರ್ನಲ್ಲಿ ಬಿಡುಗಡೆಗೊಳಿಸಿರುವ ಪ್ರಚಾರ ವೀಡಿಯೊದಲ್ಲಿ ಹೇಳಿದ್ದಾರೆ.
ಇನ್ಫೋಸಿಸ್ ನ ಸಹಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯನಾಗಿರುವ ಸುನಕ್ ಪ್ರಧಾನಿ ಹುದ್ದೆಯ ರೇಸ್ನಲ್ಲಿರುವ ಪ್ರಮುಖರಲ್ಲಿ ಸೇರಿದ್ದಾರೆ.

ಬೋರಿಸ್ ಸಂಪುಟಕ್ಕೆ ಸುನಕ್ ರಾಜೀನಾಮೆಯು ಇತರ ಸಚಿವರ ನಿರ್ಗಮನಕ್ಕೆ ನೆರವಾಗುವುದರೊಂದಿಗೆ ಅಂತಿಮವಾಗಿ ಜಾನ್ಸನ್ ರಾಜೀನಾಮೆ ನೀಡುವಂತಾಗಿತ್ತು.
ಜಾನ್ಸನ್ ಉತ್ತರಾಧಿಕಾರಿಯ ಆಯ್ಕೆಗಾಗಿ ನಿಯಮಗಳು ಮತ್ತು ವೇಳಾಪಟ್ಟಿಯನ್ನು ಕನ್ಸರ್ವೇಟಿವ್ ಪಕ್ಷದ ಸಮಿತಿಯು ಮುಂದಿನ ವಾರ ರೂಪಿಸಲಿದೆ.
ಅಟಾರ್ನಿ ಜನರಲ್,ಭಾರತ ಮೂಲದ ಸುಯೆಲ್ಲಾ ಬ್ರೇವರಮನ್ ಅವರೂ ಬ್ರಿಟನ್ ಪ್ರಧಾನಿ ಹುದ್ದೆಗೆ ರೇಸ್ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News