ಮಲಯಾಳಂ ನಟ-ನಿರ್ದೇಶಕ ಪ್ರತಾಪ್ ಪೋಥೆನ್ ನಿಧನ

Update: 2022-07-15 06:10 GMT
Photo:twitter

ಹೊಸದಿಲ್ಲಿ: ಮಲಯಾಳಂ ನಟ-ನಿರ್ದೇಶಕ ಪ್ರತಾಪ್ ಪೋಥೆನ್ ಶುಕ್ರವಾರ (ಜುಲೈ 15) ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

 ವರದಿಗಳ ಪ್ರಕಾರ, ಪ್ರತಾಪ್ ಪೋಥೆನ್ ಅವರು ಚೆನ್ನೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪ್ರತಾಪ್ ಪೋಥೆನ್ ಅವರು ಮಲಯಾಳಂ, ತಮಿಳು, ತೆಲುಗು ಹಾಗೂ  ಹಿಂದಿ ಚಲನಚಿತ್ರೋದ್ಯಮಗಳಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗಿರುವುದರ ಜೊತೆಗೆ ಪ್ರತಾಪ್ ಪೋಥೆನ್ ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಪ್ರೇಕ್ಷಕರಲ್ಲಿ ಚಿರಪರಿಚಿತರಾಗಿದ್ದರು.

ದಿವಂಗತ ಹಿರಿಯ ನಿರ್ದೇಶಕ ಭರತನ್ ನಿರ್ದೇಶಿಸಿದ ಹಾಗೂ  1978 ರಲ್ಲಿ ಬಿಡುಗಡೆಯಾದ 'ಆರವಂ' ಚಿತ್ರದ ಮೂಲಕ ಪ್ರತಾಪ್ ಪೋಥೆನ್ ನಟನೆಗೆ ಪಾದಾರ್ಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News