ಫೇಸ್ಬುಕ್, ವಾಟ್ಸ್ಆ್ಯಪ್ ಗಳಲ್ಲಿ ಮಾನವಹಕ್ಕುಗಳ ಉಲ್ಲಂಘನೆಗೆ ಅವಕಾಶ: ಒಪ್ಪಿಕೊಂಡ ಕಂಪೆನಿ

Update: 2022-07-16 17:02 GMT

ಹೊಸದಿಲ್ಲಿ, ಜು. 16: ಫೇಸ್ಬುಕ್, ವಾಟ್ಸ್ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ನ್ನು ಒಳಗೊಂಡ ಕಂಪೆನಿ ಮೆಟಾ ಪ್ಲಾಟ್‌ಫಾರ್ಮ್ಸ್‌ನಲ್ಲಿ  ಮೂರನೇ ಪಕ್ಷಗಳ ಕೃತ್ಯಗಳಿಂದಾಗಿ ಮಾನವಹಕ್ಕುಗಳ ಉಲ್ಲಂಘನೆಗಳು ನಡೆಯುವ ಅವಕಾಶಗಳಿರುವುದು ಪತ್ತೆಯಾಗಿದೆ ಎಂದು ಮೆಟಾ ಪ್ಲಾಟ್‌ಫಾರ್ಮ್ಸ್‌ ಪ್ರಥಮ ಮಾನವಹಕ್ಕುಗಳ ವರದಿ ಹೇಳಿದೆ. ಇಂಥ ಮಾನವಹಕ್ಕುಗಳ ಉಲ್ಲಂಘನೆಗಳಲ್ಲಿ, ‘‘ಅಭಿವ್ಯಕ್ತಿ ಸ್ವಾತಂತ್ರ ಮತ್ತು ಮಾಹಿತಿ ಹಕ್ಕಿನ ನಿರ್ಬಂಧಗಳು’’ ಹಾಗೂ ‘‘ವೈರತ್ವಕ್ಕೆ ಕಾರಣವಾಗುವ ದ್ವೇಷ ಹರಡುವಿಕೆ’’ ಸೇರಿದೆ.

 
ಭಾರತ ಮತ್ತು ಇತರ ದೇಶಗಳಲ್ಲಿ ಫೇಸ್ಬುಕ್ ಮತ್ತುವಾಟ್ಸ್ಆ್ಯಪ್ ಗಳಲ್ಲಿ ಸಂಭವಿಸಬಹುದಾದ ಮಾನವಹಕ್ಕುಗಳ ಉಲ್ಲಂಘನೆಗಳ ಬಗ್ಗೆ 2019ರಲ್ಲಿ ಮೆಟಾ ನಡೆಸಿದ ಮಾನವಹಕ್ಕುಗಳ ಪರಿಣಾಮ ಅಧ್ಯಯನದ ಆಧಾರದಲ್ಲಿ ಪ್ರಸಕ್ತ ವರದಿಯನ್ನು ಸಿದ್ಧಪಡಿಸಲಾಗಿದೆ.
ಮಾನವಹಕ್ಕುಗಳ ಪರಿಣಾಮಅಧ್ಯಯನವನ್ನು ಫಾಲಿ ಹೋಗ್ ಎಲ್‌ಎಲ್‌ಪಿ ಎಂಬ ಸಂಸ್ಥೆ ನಡೆಸಿತ್ತು

‘‘ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ಮುಂತಾದ ಮೆಟಾ ಪ್ಲಾಟ್‌ಫಾರ್ಮ್ಸ್‌ ವೇದಿಕೆಗಳಲ್ಲಿ ಮೂರನೇ ಪಕ್ಷಗಳು ನಡೆಸುವ ಮಾನವಹಕ್ಕುಗಳ ಉಲ್ಲಂಘನೆಗಳಿಗೆ ಅವಕಾಶ ಇರುವುದನ್ನು ಅಧ್ಯಯನವು ಪತ್ತೆಹಚ್ಚಿದೆ. ಇಂಥ ಮಾವಹಕ್ಕುಗಳ ಉಲ್ಲಂಘನೆಗಳಲ್ಲಿ, ಅಭಿವ್ಯಕ್ತಿ ಸ್ವಾತಂತ್ರ ಮತ್ತು ಮಾಹಿತಿ ಹಕ್ಕಿನ ನಿರ್ಬಂಧಗಳು; ಮೂರನೇ ಪಕ್ಷವೊಂದು ಸಮುದಾಯದಲ್ಲಿ ವೈರತ್ವ, ತಾರತಮ್ಯ ಅಥವಾ ಹಿಂಸೆಗೆ ಕಾರಣವಾಗುವಂತೆ ದ್ವೇಷ ಹರಡುವುದು; ತಾರತಮ್ಯ ನಿಷೇಧ ಹಕ್ಕಿನ ಉಲ್ಲಂಘನೆಗಳು ಸೇರಿವೆ. ಅದೂ ಅಲ್ಲದೆ, ಖಾಸಗಿತನದ ಹಕ್ಕುಗಳು ಮತ್ತು ವ್ಯಕ್ತಿಯ ಭದ್ರತೆಯ ಹಕ್ಕಿನ ಉಲ್ಲಂಘನೆಗಳೂ ನಡೆದಿವೆ’’  ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News