ಹಾಲು, ಮೊಸರು, ಆಸ್ಪತ್ರೆ ಕೊಠಡಿಗಳು...ಇಂದಿನಿಂದ ಜಿಎಸ್‍ಟಿ ದರ ಏರಿಕೆಯಾಗಿರುವ ವಸ್ತುಗಳು/ಸೇವೆಗಳ ಪಟ್ಟಿ ಇಲ್ಲಿದೆ

Update: 2022-07-18 11:39 GMT

ಹೊಸದಿಲ್ಲಿ: ಜಿಎಸ್‍ಟಿ ಮಂಡಳಿ ಕಳೆದ ತಿಂಗಳು ಕೈಗೊಂಡ ನಿರ್ಧಾರದಂತೆ ಇಂದಿನಿಂದ ಜಾರಿಗೆ ಬರುವಂತೆ ಹಲವಾರು ಉತ್ಪನ್ನಗಳು ಹಾಗೂ ಸೇವೆಗಳಿಗೆ ತೆರಿಗೆ ಏರಿಕೆಯಾಗಿವೆ. ಇವುಗಳಲ್ಲಿ ಬ್ರ್ಯಾಂಡೆಡ್ ಅಲ್ಲದ ಪ್ಯಾಕೇಜ್ಡ್ ಆಹಾರ ವಸ್ತುಗಳು, ಹಾಲು, ಮೊಸರು ಹಾಗೂ ರೂ. 5000 ಮೇಲ್ಪಟ್ಟು ಬಾಡಿಗೆ ಹೊಂದಿದ ಆಸ್ಪತ್ರೆ ಕೊಠಡಿಗಳು ಸೇರಿವೆ.

ಇಂದಿನಿಂದ ಶೇ 18ರಷ್ಟು ಜಿಎಸ್‍ಟಿ ಅನ್ವಯವಾಗುವ ಉತ್ಪನ್ನಗಳು ಮತ್ತು ಸೇವೆಗಳು ಇಂತಿವೆ;

· ಪ್ರಿಂಟಿಂಗ್

· ಎಲ್‍ಇಡಿ ದೀಪಗಳು

· ಚಾಕು, ಚಮಚ, ಫೋರ್ಕ್ ಮತ್ತು ಸೌಟು

· ನೀರಿನ ಪಂಪ್‍ಗಳು, ಡೀಪ್-ಟ್ಯೂಬ್ ವೆಲ್ ಟರ್ಬೈನ್ ಪಂಪ್‍ಗಳು, ಸಬ್‍ಮರ್ಸಿಬಲ್ ಪಂಪ್‍ಗಳು

· ಡೈರಿ ಯಂತ್ರೋಪಕರಣ

· ಟೆಟ್ರಾ ಪ್ಯಾಕ್‍ಗಳು

· ಚೆಕ್ ಪುಸ್ತಕ (ಬಿಡಿ ಅಥವಾ ಪುಸ್ತಕ ರೂಪದಲ್ಲಿ) ನೀಡಲು ಬ್ಯಾಂಕ್‍ಗಳು ವಿಧಿಸುವ ಶುಲ್ಕ

· ರಸ್ತೆಗಳು, ಸೇತುವೆಗಳು, ಮೆಟ್ರೋ, ತ್ಯಾಜ್ಯ ಸಂಸ್ಕರಣಾ ಘಟಕಗಳು, ಚಿತಾಗಾರಗಳ ಗುತ್ತಿಗೆ ಮುಂತಾದ ಸೇವೆಗಳು

· ಇ-ತ್ಯಾಜ್ಯ

 
ಶೇ 12 ಜಿಎಸ್‍ಟಿ ಅನ್ವಯವಾಗುವ ಉತ್ಪನ್ನಗಳು ಮತ್ತು ಸೇವೆಗಳು


· ಸೋಲಾರ್ ವಾಟರ್ ಹೀಟರ್

· ತಲಾ ದಿನಕ್ಕೆ ರೂ 1000 ಅಥವಾ ಕಡಿಮೆ ಶುಲ್ಕ ವಿಧಿಸುವ ಹೋಟೆಲ್‍ಗಳು

·  ಎಳನೀರು

· ಚರ್ಮದ ಉತ್ಪನ್ನಗಳಂತಹ ವಸ್ತುಗಳು

· ನಕ್ಷೆಗಳು, ಚಾರ್ಟ್‍ಗಳು, ಅಟ್ಲಾಸ್

· ಇಂಧನ ದರವೂ ಒಳಗೊಂಡಂತೆ ಬಾಡಿಗೆಗೆ ನೀಡುವ ಟ್ರಕ್‍ಗಳು ಮತ್ತು ಗೂಡ್ಸ್ ವಾಹನಗಳು

· ಬಯೋ-ಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಸವಲತ್ತುಗಳ

ಶೇ 5 ಜಿಎಸ್‍ಟಿ ಅನ್ವಯವಾಗುವ ಉತ್ಪನ್ನಗಳು ಮತ್ತು ಸೇವೆಗಳು

· ಮೊಸರು, ಮಜ್ಜಿಗೆ, ಲಸ್ಸಿ

· ಪನೀರ್

· ಸಾವಯವ ಉತ್ಪನ್ನ

· ಮಂಡಕ್ಕಿ

· ಓಟ್ಸ್

· 25 ಕೆಜಿ ವರೆಗಿನ ಧಾನ್ಯಗಳು, ಕಾಳುಗಳು, ಹಿಟ್ಟು ಮುಂತಾದ ಆಹಾರ ವಸ್ತುಗಳು ಇವುಗಳ ಸಿಂಗಲ್ ಪ್ಯಾಕ್

· ರೂ 5000 ಮೇಲ್ಪಟ್ಟ ಆಸ್ಪತ್ರೆ ಕೊಠಡಿಗಳು

· ಒಸ್ಟೊಮಿ ಉಪಕರಣಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News