ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ದಿಲ್ಲಿ ಆಸ್ಪತ್ರೆಗೆ ದಾಖಲು: ವರದಿ

Update: 2022-07-21 04:21 GMT
Photo:PTI

ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಮುಖ್ಯಮಂತ್ರಿ ಮಾನ್ ಅವರು ಅಸ್ವಸ್ಥಗೊಂಡ ನಂತರ ದಿಲ್ಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಮೂಲಗಳು ಸುದ್ದಿ ಸಂಸ್ಥೆ ANI ಗೆ ತಿಳಿಸಿವೆ.

ಮುಖ್ಯಮಂತ್ರಿಯವರಿಗೆ ಹೊಟ್ಟೆನೋವಿನ ತಪಾಸಣೆ ನಡೆಸಲಾಗಿದ್ದು, ವೈದ್ಯರು ಅವರಿಗೆ ಸೋಂಕು ತಗುಲಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಬುಧವಾರ  ಅಮೃತಸರ ಬಳಿ ಪಂಜಾಬ್ ಪೊಲೀಸರೊಂದಿಗೆ ಭಾರೀ ಗುಂಡಿನ ಚಕಮಕಿಯಲ್ಲಿ  ಸಿಧು ಮೂಸೆ ವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ಇಬ್ಬರು ಶಂಕಿತರನ್ನು ಹೊಡೆದುರುಳಿಸಿದ ನಂತರ ರಾಜ್ಯದಲ್ಲಿ ದರೋಡೆಕೋರರ ವಿರುದ್ಧ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ಪೊಲೀಸರು ಹಾಗೂ  ದರೋಡೆಕೋರರ ವಿರುದ್ಧದ ಕಾರ್ಯಪಡೆಯನ್ನು ಮಾನ್ ಅಭಿನಂದಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಜುಲೈ 21 ರಂದು ಮಾನ್ ಅವರು ಡಾ. ಗುರುಪ್ರೀತ್ ಕೌರ್ ಅವರೊಂದಿಗೆ ವಿವಾಹವಾಗಿದ್ದರು.

ಆಮ್ ಆದ್ಮಿ ಪಕ್ಷ ಅಥವಾ ಎಎಪಿ ನಾಯಕ ಭಗವಂತ್ ಮಾನ್  ಮಾರ್ಚ್ 16 ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿಎಎಪಿ  92 ಸ್ಥಾನಗಳನ್ನು ಗೆದ್ದು ಪ್ರಚಂಡ ವಿಜಯವನ್ನು ದಾಖಲಿಸಿತು. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News