ರೈತರಿಗೆ ಎಂಎಸ್‍ಪಿ ಖಾತರಿಗೊಳಿಸುವ ವ್ಯವಸ್ಥೆ ಜಾರಿಯಾಗಬೇಕು: ಆರೆಸ್ಸೆಸ್ ಸಂಯೋಜಿತ ಭಾರತೀಯ ಕಿಸಾನ್ ಸಂಘ

Update: 2022-07-21 09:54 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ರೈತರಿಗೆ ಕನಿಷ್ಠ  ಬೆಂಬಲ ಬೆಲೆ ಖಾತರಿ ನೀಡಬೇಕು ಹಾಗೂ ಅನಿಯಂತ್ರಿತ ರಾಸಾಯನಿಕ ಕೀಟನಾಶಕಗಳ ಬಳಕೆಗೆ ನಿಷೇಧ ಹೇರಬೇಕೆಂದು ಆರೆಸ್ಸೆಸ್ ಸಂಯೋಜಿತ ಸಂಸ್ಥೆಯಾಗಿರುವ ಭಾರತೀಯ ಕಿಸಾನ್ ಸಂಘ್ ಇದರ ಸಂಘಟನಾ ಕಾರ್ಯದರ್ಶಿ ದಿನೇಶ್ ಕುಲಕರ್ಣಿ ಹೇಳಿದ್ದಾರೆ. ತಮ್ಮ ಸಂಸ್ಥೆಯು ಇತ್ತೀಚೆಗೆ ರಚಿಸಲಾಗಿರುವ ಎಂಎಸ್‍ಪಿ ಸಮಿತಿಯಲ್ಲಿ ಪ್ರಾತಿನಿಧ್ಯ ಹೊಂದಿದ್ದು ನಮ್ಮ ಸಲಹೆಗಳನ್ನು ಸಮಿತಿ ಮುಂದಿಡಲಾಗುವುದು ಎಂದು ಅವರು ಹೇಳಿದ್ದಾರೆ ಎಂದು theprint.in ವರದಿ ಮಾಡಿದೆ.

ರೈತರಿಗೆ ಬೆಂಬಲ ಬೆಲೆ ಮತ್ತು ಖಾತರಿ ಎಂಎಸ್‍ಪಿ ದೊರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂಬುದು ನಮ್ಮ ಆಗ್ರಹ, ಎಂದು ಅವರು ತಿಳಿಸಿದ್ದಾರೆ. ಸರಕಾರ ಒದಗಿಸುವ ಎಲ್ಲಾ ಸವಲತ್ತುಗಳು ಮತ್ತು ಪ್ರೋತ್ಸಾಹಕಗಳು ರೈತರಿಗೆ ದೊರೆಯುವಂತಾಗಲು ವ್ಯವಸ್ಥೆ ಇರಬೇಕು ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಜಾರಿಗೆ ತಂದಿದ್ದ ಹಾಗೂ ನಂತರ ವಾಪಸ್ ಪಡೆದಿದ್ದ ಕೃಷಿ ಕಾಯಿದೆಗಳ ಬಗ್ಗೆ ಅಸಮಾಧಾನ ಹೊಂದಿದ್ದ ಕಿಸಾನ್ ಸಂಘ್, ಇದೀಗ ಸರಕಾರ ಎಂಎಸ್‍ಪಿ ಸಮಿತಿ ರಚಿಸಿದ್ದನ್ನು ಸ್ವಾಗತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News