ಜಾಧವಪುರ ವಿವಿ ಉಪಕುಲಪತಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Update: 2022-07-21 18:16 GMT

ಕೋಲ್ಕತಾ,ಜು.೨೧: ಪಶ್ಚಿಮಬಂಗಾಳದ ಜಾಧವಪುರ ವಿಶ್ವವಿದ್ಯಾನಿಲಯದ  ಹಂಗಾಮಿ ಉಪಕುಲಪತಿ ಪ್ರೊಫೆಸರ್ ಸಮಂತಕ್ ದಾಸ್ ಅವರು ಬುಧವಾರ ದಕ್ಷಿಣ ಕೋಲ್ಕತಾದಲ್ಲಿರುವ   ತನ್ನ ನಿವಾಸದಲ್ಲಿ ಮೃತಪಟ್ಟಸ್ಥಿತಿಯಲ್ಲಿ  ಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

೫೭ ವರ್ಷ ವಯಸ್ಸಿನ ಸಮಂತಕ್ ದಾಸ್ ಅವರ ಮೃತದೇಹವು  ರಾಣಿಕುತಿ ಪ್ರದೇಶದಲ್ಲಿರುವ ತನ್ನ  ಮನೆಯ ಸೀಲಿಂಗ್‌ಗೆ ಕರಾಟೆ ಬೆಲ್ಟ್‌ನಿಂದ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದೆಯೆಂದು ಅವರು ಹೇಳಿದದಾರೆ.

ದಾಸ್ ಅವರು ಬುಧವಾರ ಬೆಳಗ್ಗೆ  ವಿಶ್ವವಿದ್ಯಾನಿಲಯಕ್ಕೆ ತೆಳಿರಲಿಲ್ಲ.  ಕೆಲಸದ ನಿಮಿತ್ತ ಅವರನ್ನು ಕರೆತರಲು ವಿಶ್ವವಿದ್ಯಾನಿಲಯದಿಂದ ಕಾರನ್ನು ಳಿಸಲಾಗಿತ್ತು. ಕುಟುಂಬದ ಸದಸ್ಯರು ಅವರ ಮುಚ್ಚಿದ ಕೊಠಡಿಯ ಬಾಗಿಲನ್ನು ತಟ್ಟಿದರೂಯಾವುದೇ  ಪ್ರತಿಕ್ರಿಯೆ ಬಾರದೆ ಇದ್ದಾಗ, ಬಾಗಿಲನ್ನು  ಒಡೆದು ಒಳಗೆ ಪ್ರವೇಶಿಸಲಾಯಿತು. ಆಗ ಅವರ ಮೃತದೇಹವು ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು ಎಂದು ಪೊಲೀಸರು ತಿಳಿಇದ್ದಾರೆ.

ಕೂಡಲೇ ದಾಸ್ ಅವರನ್ನು  ಸಮೀಪದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ರೆಜೆಂಟ್ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ದಾಸ್ ಅವರ ಪತ್ನಿ  ಆತ್ಮಹತ್ಯ ಮಾಡಿಕಂಡಿದ್ದರು.

ದಾಸ್ ಅವರು ತುಲನಾತ್ಮಕ  ಸಾಹಿತ್ಯ ಇಲಾಖೆಯಲ್ಲಿ ಜನಪ್ರಿಯ  ಉಪನ್ಯಾಸಕರಾಗಿದ್ದು, ವಿವಿಯಲ್ಲಿ ೨೦೦೭-೦೯ರ ಅವಧಿಯಲ್ಲಿ ಆ ವಿಭಾಗದ ಮುಖ್ಯಸ್ಥರಾಗಿದ್ದರು. ೨೦೦೫ರಲ್ಲಿ ಅವರು ಸಾಂಸ್ಕೃತಿಕ ಪಠ್ಯಗಳು ಹಾಗೂ ದಾಖಲೆಗಳ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದುರ 
ದಾಸ್ ಅವರ ಹಂಗಾಮಿ ಉಪಕುಲಪತಿ ಸ್ಥಾನದ ಅಧಿಕಾರಾವಧಿಯು ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುವುದರಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News