ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪಿ.ವಿ. ಸಿಂಧುಗೆ ಚೊಚ್ಚಲ ಚಿನ್ನ
Update: 2022-08-08 09:32 GMT
ಬರ್ಮಿಂಗ್ ಹ್ಯಾಮ್: ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿ ಚಿನ್ನದ ಪದಕ ಜಯಿಸಿದ್ದಾರೆ.
ಗೇಮ್ಸ್ ನ ಕೊನೆಯ ದಿನವಾದ ಸೋಮವಾರ ನಡೆದ ಬ್ಯಾಡ್ಮಿಂಟನ್ ಸಿಂಗಲ್ಸ್ ನ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲೀ ಅವರನ್ನು 21-15, 20-13 ಗೇಮ್ ಗಳ ಅಂತರದಿಂದ ಮಣಿಸಿದರು.
ಸಿಂಧು 2018ರಲ್ಲಿ ನಡೆದ ಕಳೆದ ಆವೃತ್ತಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಫೈನಲ್ ಗೆ ತಲುಪಿದ್ದು, ಸೈನಾ ನೆಹ್ವಾಲ್ ಗೆ ಶರಣಾಗಿ ಬೆಳ್ಳಿ ಪದಕವನ್ನು ಜಯಿಸಿದ್ದರು.
ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಸಾಧನೆ
ರಿಯೊ ಒಲಿಂಪಿಕ್ಸ್ - ಬೆಳ್ಳಿ
ಟೋಕಿಯೋ ಒಲಿಂಪಿಕ್ಸ್ - ಕಂಚು
ವಿಶ್ವ ಚಾಂಪಿಯನ್‌ಶಿಪ್ - 2019 ರಲ್ಲಿ ಚಿನ್ನ
ಕಾಮನ್ವೆಲ್ತ್ ಗೇಮ್ಸ್ 2022 - ಚಿನ್ನ
ಕಾಮನ್ವೆಲ್ತ್ ಗೇಮ್ಸ್ 2018 - ಬೆಳ್ಳಿ
ಕಾಮನ್ವೆಲ್ತ್ ಗೇಮ್ಸ್ 2014 - ಕಂಚು
ಏಷ್ಯನ್ ಗೇಮ್ಸ್ - 2018 - ಬೆಳ್ಳಿ