ಆಸ್ಟ್ರೇಲಿಯ ವಿರುದ್ದ ಮೊದಲ ಟಿ-20ಯಲ್ಲಿ ಸೋಲು: ಬೌಲರ್ ಗಳನ್ನು ದೂಷಿಸಿದ ರೋಹಿತ್

Update: 2022-09-21 07:36 GMT
Photo:PTI

ಮೊಹಾಲಿ: ಭಾರತವು 208 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20ಯನ್ನು ಕಳೆದುಕೊಂಡಿದೆ. ಭಾರತದ ಕಳಪೆ  ಬೌಲಿಂಗ್ ಪ್ರದರ್ಶನವೇ ಇದಕ್ಕೆ ಕಾರಣ ಎಂದು  ನಾಯಕ ರೋಹಿತ್ ಶರ್ಮಾ ದೂಷಿಸಿದರು.

"ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. 200 ರನ್ ಗೆಲ್ಲಲು  ಉತ್ತಮ ಸ್ಕೋರ್ ಆಗಿದೆ. ನಾವು ಮೈದಾನದಲ್ಲಿ ನಮ್ಮ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಲಿಲ್ಲ. ನಮ್ಮ ಬ್ಯಾಟರ್‌ಗಳು ಉತ್ತಮ ಪ್ರಯತ್ನಪಟ್ಟಿದ್ದರು, ಆದರೆ ಬೌಲರ್‌ಗಳ ಪ್ರಯತ್ನ ಸಾಕಷ್ಟು ಇರಲಿಲ್ಲ. ಇಂತಹ  ವಿಷಯಗಳತ್ತ ಗಮನ ನೀಡಬೇಕಾಗಿದೆ" ಎಂದು ರೋಹಿತ್ ಪಂದ್ಯ ಬಳಿಕ ಬೇಸರ ವ್ಯಕ್ತಪಡಿಸಿದರು

"ಇದು ಹೆಚ್ಚು ಸ್ಕೋರ್ ಗಳಿಸಬಹುದಾದ ಮೈದಾನ ಎಂದು ನಮಗೆ ತಿಳಿದಿದೆ. ನೀವು 200 ರನ್ ಗಳಿಸಿದರೂ ನಿರಾಳವಾಗಿರಲು  ಸಾಧ್ಯವಿಲ್ಲ. ನಾವು ಒಂದು ಮಟ್ಟಿಗೆ ವಿಕೆಟ್ ಪಡೆದಿದ್ದೇವೆ, ಆದರೆ ಅವರು ನಿಜವಾಗಿಯೂ ಚೆನ್ನಾಗಿ ಆಡಿದ್ದರು. ಅವರು ಕೆಲವು ಅಸಾಮಾನ್ಯ ಹೊಡೆತಗಳನ್ನು ಹೊಡೆದರು. ಅಂತಿಮ 4 ಓವರ್‌ಗಳಲ್ಲಿ 60 ರನ್ ಅಗತ್ಯವಿದ್ದಾಗ  ಅವರ ವಿಕೆಟ್ ಪಡೆಯಲು ನಮಗೆ ಸಾಧ್ಯವಾಗಲಿಲ್ಲ" ಎಂದು ರೋಹಿತ್ ಹೇಳಿದರು.

ಅನುಭವಿ ವೇಗದ  ಬೌಲರ್ ಭುವನೇಶ್ವರ ಕುಮಾರ್ 4 ಓವರ್‌ಗಳಲ್ಲಿ 52 ರನ್‌ಗಳನ್ನು ಬಿಟ್ಟುಕೊಟ್ಟರೆ, ಹರ್ಷಲ್ ಪಟೇಲ್ ತನ್ನ ಪೂರ್ಣ ಕೋಟಾದಲ್ಲಿ 49 ರನ್‌ ನೀಡಿದರು. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ 3.2 ಓವರ್‌ಗಳಲ್ಲಿ 42 ರನ್ ಬಿಟ್ಟುಕೊಟ್ಟರು ಮತ್ತು ಅಕ್ಷರ್ ಪಟೇಲ್ ಅವರ 3/17 ರ ವೀರೋಚಿತ ಸ್ಪೆಲ್ ಹೊರತಾಗಿಯೂ, ಆಸೀಸ್ ಅಂತಿಮವಾಗಿ  ಭಾರತವನ್ನು ಸೋಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News