SDPI, PFI ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ ಎನ್ಐಎ ದಾಳಿ
Update: 2022-09-22 04:21 GMT
ಮಂಗಳೂರು: ಎನ್ಐಎ ಅಧಿಕಾರಿಗಳು PFI ಸಂಘಟನೆಯ ಬೆಂಗಳೂರು ಮತ್ತು ಮಂಗಳೂರು ಕಚೇರಿ ಸೇರಿದಂತೆ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಎನ್ಐಎ ಅಧಿಕಾರಿಗಳು ಬಜ್ಪೆ, ಜೋಕಟ್ಟೆ, ಬೆಂಗಳೂರಿನಲ್ಲಿರುವ ಕಚೇರಿ ಸೇರಿದಂತೆ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿ,ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ SDPI, PFI ನಾಯಕರ ಮನೆ ಮುಂಭಾಗ ಪಿಎಫ್ಐ ಕಾರ್ಯಕರ್ತರು ಜಮಾಯಿಸಿದ್ದು, ಎನ್ಐಎ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಎನ್ಐಎ ದಾಳಿ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ SDPI, PFI ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.