ಹಿಂದಿಯಲ್ಲಿ ಎಂಬಿಬಿಎಸ್ ಪಠ್ಯಪುಸ್ತಕಗಳು: ಮಧ್ಯಪ್ರದೇಶದ ನಂತರ ಈಗ ಉತ್ತರ ಪ್ರದೇಶ ಸರದಿ

Update: 2022-10-19 12:50 GMT
ಉತ್ತರ ಪ್ರದೆಶ ಸಿಎಂ ಆದಿತ್ಯನಾಥ್ (PTI)

ಲಕ್ನೋ: ಮಧ್ಯಪ್ರದೇಶದ (Madhya Pradesh) ಬಳಿಕ ಈಗ ಉತ್ತರ ಪ್ರದೇಶದ (Uttar Pradesh) ಆದಿತ್ಯನಾಥ್ ಸರಕಾರವು ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಹಿಂದಿ ಭಾಷೆಯಲ್ಲಿ ಎಂಬಿಬಿಎಸ್ (MBBS) ಪಠ್ಯಪುಸ್ತಕಗಳನ್ನು ತರಲು ಸಜ್ಜಾಗಿದೆ ಎಂದು timesofindia ವರದಿ ಮಾಡಿದೆ.

ವೈದ್ಯಕೀಯ ಶಿಕ್ಷಣ ಅಧಿಕಾರಿಗಳು ತಿಳಿಸಿರುವಂತೆ ಬಯೊಕೆಮಿಸ್ಟ್ರಿ, ಅನಾಟಮಿ ಮತ್ತು ಮೆಡಿಕಲ್ ಫಿಜಿಯಾಲಜಿ ವಿಷಯಗಳ ಕುರಿತು ಮಧ್ಯಪ್ರದೇಶದಲ್ಲಿ ಇತ್ತೀಚಿಗೆ ಜಾರಿಗೊಳಿಸಲಾಗಿರುವ ಎಂಬಿಬಿಎಸ್ ಪಠ್ಯಪುಸ್ತಕಗಳ ಪುನರ್‌ಪರಿಶೀಲನೆಗಾಗಿ ರಾಜ್ಯ ಸರಕಾರವು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಇದಲ್ಲದೆ ಇತರ ಎಂಬಿಬಿಎಸ್ ಪಠ್ಯಪುಸ್ತಕಗಳನ್ನು ಹಿಂದಿಗೆ ಅನುವಾದಿಸಲಾಗುತ್ತಿದ್ದು,ಸಮಿತಿಯು ಈ ಅನುವಾದವನ್ನು ಪರಿಶೀಲಿಸಲಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣದ ಮಹಾ ನಿರ್ದೇಶಕಿ ಶ್ರುತಿ ಸಿಂಗ್ ಅವರು,ಒಂದು ತಿಂಗಳ ಹಿಂದೆ ಸಮಿತಿಯನ್ನು ರಚಿಸಲಾಗಿದ್ದು,ಪ್ರಥಮವಾಗಿ ಮೀರತ್‌ನ ಸರಕಾರಿ ಮೆಡಿಕಲ್ ಕಾಲೇಜು ಮೊದಲು ಈ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಸದ್ಯಕ್ಕೆ ಹಿಂದಿ ಪಠ್ಯಪುಸ್ತಕಗಳನ್ನು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು. ಈ ಕ್ರಮವು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹಿಂದಿ ಮಾಧ್ಯಮ ಹಿನ್ನೆಲೆಯವರಿಗೆ ತಮ್ಮ ಮಾತೃಭಾಷೆಯಲ್ಲಿ ವಿಷಯಗಳನ್ನು ಸುಲಭವಾಗಿ ಗ್ರಹಿಸಲು ಉಪಯುಕ್ತವಾಗಲಿದೆ ಎಂದರು.

ಪಠ್ಯಪುಸ್ತಕಗಳಲ್ಲಿಯ ವೈದ್ಯಕೀಯ ಪದಗಳನ್ನು ಅನುವಾದಿಸಲು ಮತ್ತು ಅವುಗಳನ್ನು ತೆಗೆಯಲು ಸಮಿತಿಯು ಪ್ರಯತ್ನಿಸುವುದಿಲ್ಲ. ಇಡೀ ಪುಸ್ತಕವನ್ನು ಅನುವಾದಿಸುವುದು ಸಾಧ್ಯವಿಲ್ಲ,ಹಾಗೆ ಮಾಡಿದರೆ ಅದು ಜಟಿಲತೆಯನ್ನುಂಟು ಮಾಡುತ್ತದೆ ಎಂದು ವೈದ್ಯಕೀಯ ಶಿಕ್ಷಣದ ಹೆಚ್ಚುವರಿ ನಿರ್ದೇಶಕ ಎನ್.ಸಿ.ಪ್ರಜಾಪತಿ ಹೇಳಿದರು.

ಇದನ್ನೂ ಓದಿ: ಭಾರತದ ಅತ್ಯಂತ ದೊಡ್ಡ ವಾಯುಯಾನ ಸೇವೆ ಸಂಸ್ಥೆಗಳಲ್ಲೊಂದಾದ ಏರ್ ವರ್ಕ್ಸ್‌ನ್ನು ಖರೀದಿಸಿದ ಅದಾನಿ ಗ್ರೂಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News