ಬಿಲ್ಕಿಸ್ ಪ್ರಕರಣದ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸಮ್ಮತಿಸಿತ್ತು ಎಂದು ತಿಳಿದು ಆಘಾತವಾಗಿದೆ: ಸುಬ್ರಮಣಿಯನ್ ಸ್ವಾಮಿ

Update: 2022-10-20 11:19 GMT
ಸುಬ್ರಮಣಿಯನ್ ಸ್ವಾಮಿ (PTI)

ಹೊಸದಿಲ್ಲಿ: ಗುಜರಾತ್‍ನಲ್ಲಿ 2002 ಗಲಭೆಗಳ ಸಂದರ್ಭ ನಡೆದಿದ್ದ ಬಿಲ್ಕಿಸ್ ಬಾನು (Bilkis Bano) ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಕೇಂದ್ರ ಗೃಹ ಸಚಿವಾಲಯ ಸಮ್ಮತಿಸಿತ್ತು ಎಂದು ತಿಳಿದು ಆಘಾತವಾಗಿದೆ ಎಂದು ಹಿರಿಯ ಬಿಜೆಪಿ(BJP) ನಾಯಕ ಹಾಗೂ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆಯಾಗಿ ಸ್ವಾಮಿ ಮೇಲಿನಂತೆ ಹೇಳಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳ ಬಿಡುಗಡೆಗೆ ಸಿಬಿಐ ಮತ್ತು ವಿಶೇಷ ನ್ಯಾಯಾಧೀಶರ ವಿರೋಧವಿತ್ತು. ಸಿಬಿಐ ಶಿಫಾರಸನ್ನು ಕಡೆಗಣಿಸಿ ಕೇಂದ್ರ ಸರಕಾರ ಅಪರಾಧಿಗಳ ಬಿಡುಗಡೆಗೆ ಅನುಮತಿಸಿತ್ತು, ಎಂದು ಮಹುವಾ ತಮ್ಮ ಟ್ವೀಟ್‍ನಲ್ಲಿ ಹೇಳಿದ್ದರು.

ಅದಕ್ಕೆ ಪೂರಕವಾಗಿ "ಕೈದಿಗಳ ಅವಧಿಪೂರ್ವ ಬಿಡುಗಡೆ''ಯನ್ನು ಅನುಮೋದಿಸುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ದಾಖಲೆಯೊಂದನ್ನೂ ಅವರು ಶೇರ್ ಮಾಡಿದ್ದಾರೆ.

"ಬಿಲ್ಕಿಸ್ ಬಾನು ಪ್ರಕರಣದ ಎಲ್ಲಾ 11 ಅಪರಾಧಿಗಳ ಹೋಲ್‍ಸೇಲ್ 'ಅವಧಿಪೂರ್ವ ಬಿಡುಗಡೆಗೆ' ಸಿಬಿಐ ಇಲ್ಲ ಎಂದಿತ್ತು, ಸಿಬಿಐ ವಿಶೇಷ ನ್ಯಾಯಾಧೀಶರು ಇಲ್ಲ ಎಂದಿದ್ದರು, ಆದರೂ ಕೇಂದ್ರ ಹೌದು ಎಂದಿತ್ತು,'' ಎಂದು ಮಹುವಾ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ "ನನಗೆ ಆಘಾತವಾಗಿದೆ,'' ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಅಹ್ಮದಾಬಾದ್‍ನಲ್ಲಿ ದೇಶದ ಅತ್ಯಂತ ದೊಡ್ಡ ಮಾಲ್ ಸ್ಥಾಪಿಸಲಿರುವ ಲುಲು ಗ್ರೂಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News