ಇದು ಅನ್ಯಾಯ,ಸ್ವೀಕಾರಾರ್ಹವಲ್ಲ: ‘ದಿ ಹಿಂದು’ ಪ್ರಕಟಿಸಿರುವ ಖರ್ಗೆ ವ್ಯಂಗ್ಯಚಿತ್ರದ ಕುರಿತು ಜೈರಾಮ್ ರಮೇಶ್

Update: 2022-10-20 12:23 GMT
ಜೈರಾಮ್ ರಮೇಶ್ (PTI)

ಹೊಸದಿಲ್ಲಿ: ಆಂಗ್ಲ ದೈನಿಕ ‘ದಿ ಹಿಂದು’ ಗುರುವಾರ ಪ್ರಕಟಿಸಿರುವ ವ್ಯಂಗ್ಯಚಿತ್ರವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಅವರು, ‘ಅದು ಅನ್ಯಾಯದಿಂದ ಕೂಡಿದೆ, ಸ್ವೀಕಾರಾರ್ಹವಲ್ಲ’ ಎಂದು ಬಣ್ಣಿಸಿದ್ದಾರೆ.

ಸಾಮಾನ್ಯವಾಗಿ ತಾನು ವ್ಯಂಗ್ಯಚಿತ್ರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಸಮಾಧಾನದಿಂದಲೇ ಅವುಗಳನ್ನು ಸ್ವೀಕರಿಸುತ್ತೇನೆ, ಆದರೆ 'ಹಿಂದು' ಪ್ರಕಟಿಸಿರುವ ವ್ಯಂಗ್ಯಚಿತ್ರ ಅಸಹ್ಯಕರವಾಗಿದೆ ಎಂದು ರಮೇಶ್ ಹೇಳಿದ್ದಾರೆ.

ವ್ಯಂಗ್ಯಚಿತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು (Mallikarjun Kharge) ಕೈಗಳಿಲ್ಲದ ವ್ಯಕ್ತಿಯನ್ನಾಗಿ ಚಿತ್ರಿಸಲಾಗಿದ್ದು, ಕಾಂಗ್ರೆಸ್‌ನ (Congress) ಚುನಾವಣಾ ಚಿಹ್ನೆ ‘ಹಸ್ತ’ವನ್ನು ದೊಡ್ಡದಾಗಿ ಬಿಂಬಿಸಲಾಗಿದೆ. ತನ್ಮೂಲಕ ಖರ್ಗೆ ಕೈಗೊಂಬೆ ನಾಯಕರಾಗಿದ್ದಾರೆ ಎನ್ನುವುದನ್ನು ಅದು ಸೂಚಿಸಿದೆ. ಕಾಂಗ್ರೆಸ್ ಅಧ್ಯಕ್ಷತೆಗೆ ಖರ್ಗೆಯವರ ಉಮೇದುವಾರಿಕೆ ಪ್ರಕಟಗೊಂಡಾಗಿನಿಂದಲೂ ಈ ಊಹಾಪೋಹ ಹರಿದಾಡುತ್ತಿದೆ.

'ಹಿಂದು' ಕ್ಷಮೆ ಯಾಚಿಸಬೇಕು ಎಂದು ರಮೇಶ್ ಕರೆ ನೀಡಿದ್ದಾರಾದರೂ ಅದು ಈವರೆಗೆ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: ಉಪಚುನಾವಣೆಗೆ ಮುನ್ನ ತಲೆಯೆತ್ತಿದ ಬಿಜೆಪಿ ಅಧ್ಯಕ್ಷ ನಡ್ಡಾ ಅವರ 'ಸಾಂಕೇತಿಕ ಸಮಾಧಿ'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News