ಗೀತಾ ಜಿಹಾದ್ ವಿವಾದ: ಶಿವರಾಜ್ ಪಾಟೀಲ್ ಹೇಳಿಕೆ ಬೆಂಬಲಿಸದ ಕಾಂಗ್ರೆಸ್

Update: 2022-10-22 03:09 GMT
ಶಿವರಾಜ್ ಪಾಟೀಲ್

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ಅವರು ನೀಡಿದ 'ಗೀತಾ ಜಿಹಾದ್' ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿದೆ ಎಂದು hindustantimes.com ವರದಿ ಮಾಡಿದೆ.

ಶಿವರಾಜ್ ಪಾಟೀಲ್ ಹೇಳಿಕೆಗೆ ಪಕ್ಷ ಕ್ಷಮೆ ಯಾಚಿಸುವುದಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ. ವಾಸ್ತವವಾಗಿ ಅವರು ಹೇಳಿರುವುದು ತದ್ವಿರುದ್ಧವಾದದ್ದು ಎಂದು ಸ್ಪಷ್ಟನೆ ನೀಡಿದೆ. ಆದಾಗ್ಯೂ, ಭಗವದ್ಗೀತೆಯಲ್ಲಿ ಜಿಹಾದ್ ಉಲ್ಲೇಖವಿದೆ. ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಜಿಹಾದ್ ಪಾಠ ಮಾಡಿದ್ದಾನೆ ಎಂಬ ಅರ್ಥದ ಹೇಳಿಕೆಯನ್ನು ನೀಡಿದ ಶಿವರಾಜ್ ಪಾಟೀಲ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಚುಚ್ಚಿದೆ. ಶಿವರಾಜ್ ಪಾಟೀಲ್ ಅವರು ಯಾವ ಭಗವದ್ಗೀತೆ ಓದಿದ್ದಾರೆಯೋ ತಿಳಿಯದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಮಿಲಿಂದ್ ಪರಾಂಡೆ ವ್ಯಂಗ್ಯವಾಡಿದ್ದಾರೆ.

ಜಿಹಾದ್ ಉಲ್ಲೇಖ ಇರುವುದು ಖುರಾನ್‍ನಲ್ಲಿ ಮಾತ್ರ ಅಲ್ಲ; ಮಹಾಭಾರತದಲ್ಲಿ, ಭಗದ್ಗೀತೆಯಲ್ಲಿ ಜಿಹಾದ್ ಉಲ್ಲೇಖವಿದ್ದು, ಕೃಷ್ಣ ಅರ್ಜುನನಿಗೆ ಜಿಹಾದ್ ಬೋಧನೆ ಮಾಡಿದ್ದಾನೆ ಎಂದು ಶಿವರಾಜ್ ಪಾಟೀಲ್ ಹೇಳಿದ್ದರು.

ಆದರೆ ಮರುದಿನ ಸ್ಪಷ್ಟನೆ ನೀಡಿದ ಶಿವರಾಜ್ ಪಾಟೀಲ್ ತಾವು ಜಿಹಾದ್ ಹೆಸರು ಉಲ್ಲೇಖಿಸಿಲ್ಲ ಎಂದಿದ್ದರು. ಅರ್ಜುನನಿಗೆ ಕೃಷ್ಣ ಜಿಹಾದ್ ಬೋಧಿಸಿದ್ದರೇ ಎಂದು ಕೇಳಿದಾಗ, ಇಲ್ಲ ಎಂದು ನಾನು ಹೇಳಿದ್ದಾಗಿ ಸ್ಪಷ್ಟಪಡಿಸಿದ್ದರು. ಹಿಂದೂ ಧರ್ಮದಲ್ಲಿ ಜಿಹಾದ್ ಮಹಾತ್ಮಾಗಾಂಧಿಯಂಥ ಒಳ್ಳೆಯವರನ್ನು ಹತ್ಯೆ ಮಾಡುತ್ತಿದೆ ಎಂದು ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News