ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್‌ ಪತನ: ಶೀಘ್ರದಲ್ಲೇ ಮದುವೆಯಾಗಲಿದ್ದ ಮೇಜರ್‌ ಮುಸ್ತಫಾ ಹುತಾತ್ಮ

Update: 2022-10-22 15:39 GMT

ಉದಯಪುರ: ಅರುಣಾಚಲ ಪ್ರದೇಶದಲ್ಲಿ (Arunachal Pradesh) ಶುಕ್ರವಾರ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ (Helicopter Crash) ಸಾವನ್ನಪ್ಪಿದ ಐವರು ಸೇನಾ ಸಿಬ್ಬಂದಿಗಳ ಪೈಕಿ ಮೇಜರ್ ಮುಸ್ತಫಾ ಬೋಹರಾ (Major Mustafa Bohara) ಎಂಬ ಸೇನಾ ಸಿಬ್ಬಂದಿಯೂ ಸೇರಿದ್ದು, ಅವರ ನಿಧನದಿಂದ ಕುಟುಂಬವು ಶೋಕದಲ್ಲಿ ಮುಳುಗಿದೆ.

ಬೋಹರಾ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದರು. ಅಲ್ಲದೆ, ಇತ್ತೀಚೆಗೆ ತಮ್ಮ ಮದುವೆಗೆ ಬೇಕಾದ ವ್ಯವಸ್ಥೆ ಮಾಡಲು ಅವರು ತಮ್ಮ ಹಳ್ಳಿಗೆ ಹೋಗಿದ್ದರು ಎಂದು ವರದಿಯಾಗಿದೆ.

ಬೋಹರಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಖೇರೋಡಾದ ಉದಯ್ ಶಿಕ್ಷಾ ಮಂದಿರದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಉದಯಪುರ ನಗರಕ್ಕೆ ಬಂದ ನಂತರ ಅವರು ಸೇಂಟ್ ಪಾಲ್ಸ್ ಶಾಲೆಯಲ್ಲಿ ಓದಿದರು. ಅದರ ನಂತರ, ಅವರು ಭಾರತೀಯ ಸೇನೆಗೆ ಸೇರಿದ್ದರು.

ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವ ಬೋಹರಾ ಅವರ ತಂದೆ ಉದಯಪುರಕ್ಕೆ ಆಗಮಿಸುತ್ತಿದ್ದು, ಮುಸ್ತಫಾ ಅವರ ಮೃತದೇಹವು ವಿಧಿವಿಧಾನಗಳ ನಂತರ ರವಿವಾರ ಸಂಜೆಯೊಳಗೆ ಅವರ ಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ.

ಹುತಾತ್ಮ ಯೋಧನ ತಾಯಿ ಮತ್ತು ಸಹೋದರಿ ತುಂಬಾ ದುಖಿತರಾಗಿದ್ದು, ಸಾಂತ್ವನ ಹೇಳಲು ಸಾಧ್ಯವಾಗದಷ್ಟು ಭಾವನಾತ್ಮಕವಾಗಿ ಒಡೆದು ಹೋಗಿದ್ದಾರೆ ಎಂದು ಕುಟುಂಬದೊಂದಿಗೆ ಸಂಪರ್ಕ ಹೊಂದಿರುವ ಉದಯಪುರದ ನಿವಾಸಿ ಹಿತೇಶ್ ಕುಮಾರ್ ಹೇಳಿದ್ದಾರೆ. 

ಮೇಜರ್ ಬೊಹರಾ, ತಂದೆ ಜಕಿಯುದ್ದೀನ್ ಬೊಹರಾ, ತಾಯಿ ಫಾತಿಮಾ ಬೊಹರಾ ಮತ್ತು ಸಹೋದರಿ ಅಲೆಫಿಯಾ ಬೊಹರಾ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ: ಅರುಣಾಚಲ ಪ್ರದೇಶ: ಹೆಲಿಕಾಪ್ಟರ್ ಪತನದಲ್ಲಿ ಕಾಸರಗೋಡಿನ ಸೈನಿಕ ಹುತಾತ್ಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News