ಅಭ್ಯರ್ಥಿಗಳಿಗೆ ಮತದಾರರ ಪಟ್ಟಿಯ ಪೂರೈಕೆ ಪ್ರಶ್ನಿಸಿ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

Update: 2022-10-25 15:17 GMT

ಹೊಸದಿಲ್ಲಿ,ಅ.25: ಮತದಾರರ ನೋಂದಣಿ (Voter registration)ನಿಯಮಗಳು 1960ರ ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಉತ್ತರಿಸುವಂತೆ ಕೇಂದ್ರ ಮತ್ತು ಇತರರಿಗೆ ಸರ್ವೋಚ್ಚ ನ್ಯಾಯಾಲಯವು ನೋಟಿಸ್ ಗಳನ್ನು ಹೊರಡಿಸಿದೆ. 11(ಸಿ) ಮತ್ತು 22 (ಸಿ) ನಿಬಂಧನೆಗಳು ಚುನಾವಣಾ ಆಯೋಗವು ಚುನಾವಣೆಗೆ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿಗೆ ಮತದಾರರ ಪಟ್ಟಿಯ ಎರಡು ಪ್ರತಿಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿವೆ.

 ವಕೀಲರಾದ ಹರಜ್ಞಾನ ಸಿಂಗ್ ಗಹ್ಲೋಟ್(Harjana Singh Gahlot) ಮತ್ತು ಸಂಜನಾ ಗಹ್ಲೋಟ್(Sanjana Gahlot) ಸಲ್ಲಿಸಿರುವ ಪಿಐಎಲ್ ಬೃಹತ್ ವೆಚ್ಚ ಮತ್ತು ಭಾರೀ ಪ್ರಮಾಣದಲ್ಲಿ ಕಾಗದದ ಬಳಕೆಯನ್ನು ಉಳಿಸಲು ಪರ್ಯಾಯ ಕ್ರಮಕ್ಕೆ ನಿರ್ದೇಶನ ಕೋರಿದೆ.

ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಮತದಾರರ ಪಟ್ಟಿಗಳನ್ನು ಮುದ್ರಿಸಲು ಮತ್ತು ಅವುಗಳನ್ನು ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಒದಗಿಸಲು ದೇಶವು ಸುಮಾರು 47.84 ಕೋ.ರೂ.ಗಳ ವೆಚ್ಚವನ್ನು ಭರಿಸಬೇಕಾಗಿತ್ತು ಎಂದು ಪಿಐಎಲ್ ಆರೋಪಿಸಿದೆ. ಮತದಾರರ ಪಟ್ಟಿಗಳನ್ನು ಮುದ್ರಿಸಲು ಪ್ರತಿ ವರ್ಷ 31 ಮರಗಳನ್ನು ಕಡಿಯಲಾಗುತ್ತಿದೆ ಎಂದೂ ಅದು ಬೆಟ್ಟು ಮಾಡಿದೆ. ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಗಳನ್ನು ಹೊರಡಿಸಿರುವ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ನ.28ರೊಳಗೆ ಉತ್ತರಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News