ಮ.ಪ್ರ:‘ಬೆಂಕಿಯುಂಡೆ ಯುದ್ಧ’ದಲ್ಲಿ 30 ಜನರಿಗೆ ಗಾಯ; ಏನಿದು ಆಚರಣೆ?

Update: 2022-10-27 14:54 GMT

ಇಂದೋರ,ಅ.27: ಇಂದೋರ ಜಿಲ್ಲೆಯ ಗೌತಮಪುರ ಗ್ರಾಮದಲ್ಲಿ ಬುಧವಾರ ಸಾಂಪ್ರದಾಯಿಕ ಹಿಂಗೋಟ್ (ಒಂದು ವಿಧದ ಬೆಂಕಿಯುಂಡೆ) ಯುದ್ಧ ಆಚರಣೆ ಸಂದರ್ಭದಲ್ಲಿ 30 ಜನರು ಗಾಯಗೊಂಡಿದ್ದು,ಈ ಪೈಕಿ ಏಳು ಜನರಿಗೆ ಗಂಭೀರ ಗಾಯಗಳಾಗಿವೆ.

ಹಿಂಗೋಟ್ ಯುದ್ಧ (Battle of Hingot) ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಪ್ರತಿವರ್ಷ ದೀಪಾವಳಿಯ ಎರಡನೇ ದಿನ ಆಚರಿಸಲಾಗುತ್ತದೆ. ಆದರೆ ಈ ವರ್ಷ ದೀಪಾವಳಿಯ ಮೂರನೇ ದಿನ ಆಚರಿಸಲಾಗಿತ್ತು. ಕೋವಿಡ್ನಿಂದಾಗಿ ಕಳೆದೆರಡು ವರ್ಷಗಳಿಂದ ಸಂಪ್ರದಾಯವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ.

‘ಹಿಂಗೋಟ್ ಯುದ್ಧ ’ಉತ್ಸವಕ್ಕಾಗಿ ಜಿಲ್ಲಾಡಳಿತವು ಪೊಲೀಸ್ ಪಡೆ, ಅಗ್ನಿಶಾಮಕ ದಳ ಮತ್ತು ಆ್ಯಂಬುಲೆನ್ಸ್ಗಳನ್ನು ನಿಯೋಜಿಸಿತ್ತು. ಸಿಸಿಟಿವಿ(CCTV) ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಸಾವಿರಾರು ಜನರು ಈ ಉತ್ಸವನ್ನು ವೀಕ್ಷಿಸಲು ಗೌತಮಪುರಕ್ಕೆ ಭೇಟಿ ನೀಡುತ್ತಾರೆ. ಸುರಕ್ಷತೆಗಾಗಿ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಉಪವಿಭಾಗಾಧಿಕಾರಿ ರವಿಕುಮಾರ್ ತಿಳಿಸಿದರು.

ಹಿಂಗೋಟ್ ಒಂದು ವಿಧದ ಹಣ್ಣಾಗಿದ್ದು,ಅದನ್ನು ಒಣಗಿಸಿದ ಬಳಿಕ ಅದರಲ್ಲಿ ಗನ್ಪೌಡರ್ ತುಂಬಿ ಕಟ್ಟಿಗೆಗೆ ಕಟ್ಟಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಅದಕ್ಕೆ ಬೆಂಕಿ ಹಚ್ಚಿ ಪರಸ್ಪರರತ್ತ ಎಸೆಯಲಾಗುತ್ತದೆ. ಬುಧವಾರ ಬೆಳಿಗ್ಗೆ ನಡೆದಿದ್ದ ‘ಬೆಂಕಿಯುಂಡ ಯುದ್ಧ ’ದಲ್ಲಿ ಎರಡು ಗುಂಪುಗಳಿಗೆ ಸೇರಿದ 150 ಜನರು ಪಾಲ್ಗೊಂಡಿದ್ದರು.

Similar News