ಪೊಲೀಸರಿಗೆ “ಒಂದು ರಾಷ್ಟ್ರ, ಒಂದು ಸಮವಸ್ತ್ರ” ಕಲ್ಪನೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

Update: 2022-10-28 11:04 GMT

ಹೊಸದಿಲ್ಲಿ: ಪೊಲೀಸರಿಗೆ “ಒಂದು ರಾಷ್ಟ್ರ, ಒಂದು ಸಮವಸ್ತ್ರ” ಎಂಬ ಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ Prime Minister Narendra Modi ಶುಕ್ರವಾರ ಪ್ರಸ್ತಾಪಿಸಿದ್ದಾರೆ.

ಇದು "ಕೇವಲ ಕಲ್ಪನೆ" . ಹೇರಿಕೆಯಲ್ಲ ಎಂದ ಪ್ರಧಾನಿ,  ಇದನ್ನು ಕೇವಲ ಸಲಹೆಯಾಗಿ ಯೋಚಿಸುವಂತೆ ರಾಜ್ಯಗಳನ್ನು ಕೇಳಿಕೊಂಡರು.

"ಪೊಲೀಸರಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ' ಎಂಬುದು ಕೇವಲ ಕಲ್ಪನೆ. ನಾನು ಅದನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ. ಸ್ವಲ್ಪ ಯೋಚಿಸಿ. ಇದು ಸಂಭವಿಸಬಹುದು, ಇದು ಐದು, 50, ಅಥವಾ 100 ವರ್ಷಗಳಲ್ಲಿ ಆಗಬಹುದು " ಎಂದು ಪ್ರಧಾನಿ ಮೋದಿ ಹೇಳಿದರು.

ರಾಜ್ಯ ಗೃಹ ಮಂತ್ರಿಗಳ "ಚಿಂತನ್ ಶಿಬಿರ" ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶಾದ್ಯಂತ ಪೊಲೀಸರ ಗುರುತು ಒಂದೇ ಆಗಿರಬಹುದು ಎಂದು ತಾನು ಭಾವಿಸುತ್ತೇನೆ ಎಂದರು.

ಅಪರಾಧಗಳು ಹಾಗೂ ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರವನ್ನು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಏಕರೂಪದ ಕಾನೂನು ಹಾಗೂ  ಸುವ್ಯವಸ್ಥೆ ನೀತಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರೆಯನ್ನು ಬೆಂಬಲಿಸಿದ ಪ್ರಧಾನಿ ಮೋದಿ, "ಸಹಕಾರಿ ಒಕ್ಕೂಟವು ಸಂವಿಧಾನದ ಭಾವನೆ ಮಾತ್ರವಲ್ಲದೆ ರಾಜ್ಯಗಳು ಮತ್ತು ಕೇಂದ್ರದ ಜವಾಬ್ದಾರಿಯಾಗಿದೆ.. ಸಂವಿಧಾನದ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದರೂ, ಅವು ದೇಶದ ಏಕತೆ ಹಾಗೂ  ಸಮಗ್ರತೆಯೊಂದಿಗೆ ಸಮಾನವಾಗಿ ಸಂಬಂಧ ಹೊಂದಿವೆ'' ಎಂದು  ಹೇಳಿದರು.

Similar News