ಅಮಿತ್‌ ಮಾಳವೀಯ ದೂರು: ದಿ ವೈರ್ ಕಛೇರಿ ಸೇರಿದಂತೆ ನಾಲ್ವರು ಸಂಪಾದಕರ ನಿವಾಸದ ಮೇಲೆ ದಿಲ್ಲಿ ಪೊಲೀಸ್‌ ದಾಳಿ

Update: 2022-10-31 15:33 GMT

ಹೊಸದಿಲ್ಲಿ: ದಿ ವೈರ್ ಕಚೇರಿ ಮತ್ತು ಅದರ ನಾಲ್ವರು ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂಕೆ ವೇಣು, ಸಿದ್ಧಾರ್ಥ್ ಭಾಟಿಯಾ ಮತ್ತು ಜಾಹ್ನವಿ ಸೇನ್ ಅವರ ಮನೆಗಳಲ್ಲಿ ದಿಲ್ಲಿ ಪೊಲೀಸರು ಸೋಮವಾರ ಶೋಧ ನಡೆಸಿದ್ದಾರೆ ಎಂದು Scroll.in ವರದಿ ಮಾಡಿದೆ.

ಭಾರತೀಯ ಜನತಾ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ವಂಚನೆ, ಫೋರ್ಜರಿ, ಮಾನನಷ್ಟ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಸಂಪಾದಕರ ವಿರುದ್ಧ ಎಫ್‌ಐಆರ್ ದಾಖಲಿಸಿದ ಎರಡು ದಿನಗಳ ನಂತರ ಈ ದಾಳಿಗಳು ನಡೆದಿವೆ.

"ಪೊಲೀಸರು ಸಂಜೆ 4.40 ರ ಸುಮಾರಿಗೆ ಬಂದು 6 ಗಂಟೆಗೆ ಹೋದರು" ಎಂದು ವೇಣು Scroll.in ಗೆ ತಿಳಿಸಿದ್ದಾರೆ.

 "ಅಮಿತ್ ಮಾಳವಿಯಾ ಸಲ್ಲಿಸಿದ ಎಫ್‌ಐಆರ್‌ ಆಧಾರದಲ್ಲಿ ದಿಲ್ಲಿ ಪೊಲೀಸ್ ಇಲ್ಲಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ನನ್ನ ಐಫೋನ್ ಮತ್ತು ಐಪ್ಯಾಡ್ ಅನ್ನು ಕ್ಲೋನಿಂಗ್ ಮಾಡಲು ತೆಗೆದುಕೊಂಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ವರದರಾಜನ್ ಮತ್ತು ಸೇನ್ ಅವರ ಮನೆಗಳಲ್ಲಿಯೂ ಶೋಧಕಾರ್ಯ ಅದೇ ಸಮಯದಲ್ಲಿ ನಡೆದಿವೆ ಎಂದು ಅವರು Scroll.in ಗೆ ತಿಳಿಸಿದ್ದಾರೆ. ಭಾಟಿಯಾ ಅವರ ಮನೆಯಲ್ಲಿ ರಾತ್ರಿ 7.30 ರ ಸುಮಾರಿಗೆ ಹುಡುಕಾಟ ಪ್ರಾರಂಭವಾಗಿದ್ದು, ಸುಮಾರು 30 ಪೊಲೀಸ್ ಅಧಿಕಾರಿಗಳು ರಾತ್ರಿ 8 ರ ನಂತರ ದಿ ವೈರ್ ಕಚೇರಿಯನ್ನು ತಲುಪಿ ಶೋಧ ಕಾರ್ಯ ನಡೆಸಿದ್ದಾರೆ.

ನಾವು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ವರದರಾಜನ್ ಹೇಳಿದರು. “ಅವರು ಕೇಳಿದ ಸಾಧನಗಳು ಮತ್ತು ಪಾಸ್‌ವರ್ಡ್‌ಗಳನ್ನು ನಾವು ಅವರಿಗೆ ನೀಡಿದ್ದೇವೆ.  ಒಂದು ಮ್ಯಾಕ್‌ಬುಕ್, ಎರಡು ಐಫೋನ್‌ಗಳು ಮತ್ತು ಒಂದು ಐಪ್ಯಾಡ್ ಅನ್ನು ಪೊಲೀಸರು ತೆಗೆದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

Similar News