150-200 ಜನರ ಸಾಮರ್ಥ್ಯದ ಸೇತುವೆ ಪ್ರವೇಶಿಸಲು 650 ಮಂದಿಗೆ ಟಿಕೆಟ್ !

Update: 2022-10-31 17:41 GMT

ಅಹ್ಮದಾಬಾದ್, ಅ. 31: ಗುಜರಾತ್‌ನ ಮೊರ್ಬಿಯಲ್ಲಿ ಅಕ್ಟೋಬರ್ 30 ‘ಕಪ್ಪು ರವಿವಾರ’ವಾಗಿ ದಾಖಲಾಗಿದ್ದು, ಪ್ರಸಿದ್ದ ಸೇತುವೆ ಮೇಲೆ ನಡೆಯಲು 17 ರೂ. ಕೊಟ್ಟು ಪಡೆದ ಪಾಸ್ ಅನೇಕರಿಗೆ ಸಾವಿನ ಟಿಕೇಟ್ ಆಗಿ ಪರಿಣಮಿಸಿದೆ. 

15 ವರ್ಷಕ್ಕೆ ಸೇತುವೆಯ ನಿರ್ವಹಣೆ ಹಾಗೂ ಉಸ್ತುವಾರಿ ವಹಿಸಿಕೊಂಡಿರುವ ಒರೆವಾ ಕಂಪೆನಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಶತಮಾನದಷ್ಟು ಹಳೆಯದಾದ, ಕೇವಲ 150ರಿಂದ 200 ಜನ ಸಾಮರ್ಥ್ಯದ ಸೇತುವೆ ಪ್ರವೇಶಿಸಲು 650 ಜನರಿಗೆ ಟಿಕೆಟ್ ನೀಡಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.  
ಈ ಸೇತುವೆ ಪ್ರವೇಶಿಸಲು ರವಿವಾರ 650 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಆದರೆ, ಈ ಸೇತುವೆಗೆ 120ರಿಂದ 200 ಜನರನ್ನು ನಿಭಾಯಿಸುವ ಸಾಮರ್ಥ್ಯ ಮಾತ್ರ ಇತ್ತು ಎಂದು ಅದು ಹೇಳಿದೆ.

ಜನದಟ್ಟಣೆಯೇ ಕಾರಣ: ವಿಧಿ ವಿಜ್ಞಾನ ಪ್ರಯೋಗಾಲಯ

ಜನ ದಟ್ಟಣೆಯಿಂದ ಸೇತುವೆ ಕುಸಿಯಲು ಕಾರಣ ಎಂದು ಭಾರತ ಅತ್ಯುಚ್ಚ ವಿಧಿ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ. 
ಸೇತುವೆಯ ಮಾದರಿ ಸಂಗ್ರಹಿಸಲು ಗ್ಯಾಸ್ ಕಟ್ಟರ್ ಅನ್ನು ಬಳಸಲಾಗಿದೆ. ಈಗಷ್ಟೇ ನವೀಕರಣಗೊಂಡ ಸೇತುವೆಯ ರಚನಾತ್ಮಕ ಸಮಗ್ರತೆ ದುರ್ಬಲಗೊಂಡಿರುವುದು ಪತ್ತೆಯಾಗಿದೆ ಎಂದು ಭಾರತದ ಅತ್ಯುಚ್ಛ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿ ತಿಳಿಸಿದ್ದಾರೆ. 

Similar News