ಗುಜರಾತ್ ಸೇತುವೆ ಕುಸಿತ ಪ್ರಕರಣ: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರಾಜೀನಾಮೆ ನೀಡಬೇಕೆಂದ ಕೇಜ್ರಿವಾಲ್

ಗಡಿಯಾರದ ಕಂಪೆನಿಗೆ ತೂಗು ಸೇತುವೆ ಟೆಂಡರ್ ನೀಡಿದ್ದೇಕೆ ಎಂದು ಪ್ರಶ್ನಿಸಿದ ದಿಲ್ಲಿ ಸಿಎಂ

Update: 2022-11-01 07:57 GMT

ಹೊಸದಿಲ್ಲಿ: 134 ಜನರ ಸಾವಿಗೆ ಕಾರಣವಾದ ಮೊರ್ಬಿ ಸೇತುವೆ ಕುಸಿತದ ಘಟನೆಯ ಕುರಿತು ಗುಜರಾತ್‌ನ ಬಿಜೆಪಿ ಸರಕಾರವನ್ನು ಗುರಿಯಾಗಿಸಿಕೊಂಡಿರುವ  ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು "ತಕ್ಷಣ ರಾಜೀನಾಮೆ ನೀಡಬೇಕು" ಹಾಗೂ  ಆದಷ್ಟು ಬೇಗನೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಗುಜರಾತ್‌ನ ರಾಜಕೀಯದಲ್ಲಿ ಪ್ರಮುಖ ಪಕ್ಷವಾಗಿ  ಹೊರಹೊಮ್ಮಲು ಶ್ರಮಿಸುತ್ತಿರುವ ಕೇಜ್ರಿವಾಲ್, ಸೇತುವೆ ದುರಂತವು ಭ್ರಷ್ಟಾಚಾರದ ಪರಿಣಾಮವಾಗಿದೆ ಎಂದು ಆರೋಪಿಸಿದರು.

"ಗಡಿಯಾರಗಳನ್ನು ತಯಾರಿಸುವ ಕಂಪನಿಗೆ ಸೇತುವೆಯ ಟೆಂಡರ್ ಅನ್ನು ಏಕೆ ನೀಡಲಾಯಿತು? ಇದರರ್ಥ ಅವರು ಪಕ್ಷದೊಂದಿಗೆ (ಬಿಜೆಪಿ) ಸಂಪರ್ಕ ಹೊಂದಿದ್ದರು ಎಂದರ್ಥ. ಪ್ರಕರಣದ ಎಫ್‌ಐಆರ್‌ನಲ್ಲಿ ಕಂಪನಿ ಅಥವಾ ಅದರ ಮಾಲೀಕರನ್ನು ಉಲ್ಲೇಖಿಸಲಾಗಿಲ್ಲ" ಎಂದು ದಿಲ್ಲಿ ಮುಖ್ಯಮಂತ್ರಿ ಹೇಳಿದರು.

Similar News