ಆಂಧ್ರಪ್ರದೇಶ ಸಿಎಂ ಕಚೇರಿ ಮುಂದೆಯೇ ಮಹಿಳೆ ಆತ್ಮಹತ್ಯೆಗೆ ಯತ್ನ

Update: 2022-11-03 02:05 GMT

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿಯವರ ಕಚೇರಿ (Andhra Pradesh Chief Minister) ಮಂದೆಯೇ ಕೈ ಕತ್ತರಿಸಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಕಾಕಿನಾಡದಲ್ಲಿರುವ ತಮ್ಮ ಮನೆ ಮಾರಾಟಕ್ಕೆ ಸಚಿವ ದಾದಿಶೆಟ್ಟಿ ರಾಜಾ ಅವರ ಗನ್‍ಮ್ಯಾನ್ ಅಡ್ಡಿಪಡಿಸುತ್ತಿರುವುದು ಮಾತ್ರವಲ್ಲದೇ ಬೆದರಿಕೆ ಹಾಕಿದ್ದಾರೆ ಎನ್ನುವುದು ರಾವುಡುಪಲೇಂ ನಿವಾಸಿಯಾದ ಅರುದಾ ಆಪಾದಿಸಿದ್ದಾರೆ.

ಸಿಎಂಓ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಿ ವಾಪಸ್ಸಾದ ಬಳಿಕ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಎಂ ವೈ.ಎಸ್. ಜಗನ್ಮೋಹನ ರೆಡ್ಡಿ (Chief Minister YS Jagan Mohan Reddy) ಅವರನ್ನು ಭೇಟಿ ಮಾಡಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು ಎನ್ನಲಾಗಿದೆ.

ಪುತ್ರಿ ಶ್ರೀಲಕ್ಷ್ಮಿ ಹುಟ್ಟಿನಿಂದಲೇ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗಾಗಿ ಮನೆಯನ್ನು ಮಾರಾಟ ಮಾಡಲು ಬಯಸಿದ್ದಾಗಿ ಸುದ್ದಿಗಾರರ ಜತೆ ಮಾತನಾಡಿದ ಮಹಿಳೆ ಸ್ಪಷ್ಟಪಡಿಸಿದರು. ಆದರೆ ಪಕ್ಕದ ಮನೆಯಲ್ಲಿ ವಾಸವಿರುವ ಸಚಿವರ ಗನ್‍ಮ್ಯಾನ್ ಮನೆ ಮಾರಾಟಕ್ಕೆ ತಡೆ ಒಡ್ಡುತ್ತಿದ್ದಾರೆ ಎಂದು ಆಪಾದಿಸಿದರು. 40 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನು ತನಗೆ ಕೇವಲ 10 ಲಕ್ಷಕ್ಕೆ ಮಾರಾಟ ಮಾಡುವಂತೆ ಗನ್‍ಮ್ಯಾನ್ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿದರು.

ಈ ಸಂಬಂಧ ಸ್ಪಂದನ ಕಾರ್ಯಕ್ರಮದಲ್ಲಿ ದೂರು ನೀಡಿದ್ದ ಮಹಿಳೆ ಸಿಎಂ ಅವರ ಭೇಟಿಗಾಗಿ ಆಗಮಿಸಿದ್ದರು. ಸಿಎಂಓ ಕಚೇರಿಯಿಂದ ವಾಪಸ್ಸಾದ ಬಳಿಕ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರು. ಈ ಬಗ್ಗೆ timesofindia.com ವರದಿ ಮಾಡಿದೆ.

Similar News