ಪ್ರತ್ಯೇಕತೆ ಪೊಲಿಟಿಕ್ಸ್ ಬಗ್ಗೆ ಹೀಗಿತ್ತು ಚಂಪಾ ಪ್ರತಿಕ್ರಿಯೆ

Update: 2022-11-03 05:46 GMT

2018ರಲ್ಲಿ ಪ್ರತ್ಯೇಕತೆಯ ಕೂಗು ತೀವ್ರವಾಗಿ ಕೇಳಿಬರುತ್ತಿದ್ದ ಹೊತ್ತಲ್ಲಿ ತಮ್ಮ ಭಾಷಣ ಮತ್ತು ಸಂದರ್ಶನಗಳಲ್ಲಿ ಸಾಹಿತಿ ಚಂಪಾ ಕಟುವಾಗಿ ಟೀಕಿಸಿದ್ದರು. ತಾವೆಂದೂ ಪ್ರತ್ಯೇಕತೆಯ ವಿರುದ್ಧ ಎಂದಿದ್ದ ಅವರು, ಪ್ರತ್ಯೇಕತೆಗೆ ಒತ್ತಾಯಿಸುತ್ತಿರುವ ರಾಜಕಾರಣಿಗಳನ್ನು ಪುಢಾರಿಗಳು ಎಂದು ಜರೆದಿದ್ದರು. ರಾಜ್ಯ ವಿಭಜನೆ ಎಂಬುದು ಕಡೆಗೆ ಜಾತಿ ಆಧಾರಿತ ವಿಭಜನೆ ಕೂಡ ಆಗುವ ಅಪಾಯವಿದೆಯೆಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು. 

ರಾಜ್ಯ ಒಡೆಯಲು ನಿಂತಿರುವವರಿಗೆ ರಾಜ್ಯ ಕಟ್ಟಿದವರ ನೋವು, ಸಂಕಟ ಗೊತ್ತಿಲ್ಲ. ಒಗ್ಗಟ್ಟಿನ ಬಗ್ಗೆ ಅರಿವಿಲ್ಲ. ಕರ್ನಾಟಕ ಎಂದರೆ ಅಖಂಡ ಕರ್ನಾಟಕವೇ ಹೊರತು ವಿಭಿನ್ನ ಕರ್ನಾಟಕವಲ್ಲ. ಯಾರದೋ ಆಶೀರ್ವಾದ, ಮಂತ್ರವಾದಿಯ ಬೂದಿಯಿಂದ ಕರ್ನಾಟಕ ಹುಟ್ಟಿದ್ದಲ್ಲ. ನಾಡಿನ ಏಕೀಕರಣಕ್ಕೆ ಹಲವು ಹೋರಾಟಗಾರರ ತ್ಯಾಗ, ರಕ್ತ, ಬಲಿದಾನದ ಚರಿತ್ರೆಯಿದೆ ಎಂದು ನೆನಪಿಸಿಕೊಂಡಿದ್ದರು ಚಂಪಾ. ಪ್ರತ್ಯೇಕ ರಾಜ್ಯದ ಕೂಗು ಒಡೆದು ಆಳಬಯಸುವವರ ಹುನ್ನಾರ ಎಂದೂ ಅವರು ಹೇಳಿದ್ದರು. ಪ್ರತ್ಯೇಕತೆ ಕೂಗು ಕೇಳಿಬರುವಾಗ ಅದರ ಹಿಂದೆ ಅಭಿವೃದ್ಧಿ ವಂಚಿತವಾದುದರ ಕುರಿತ ನೋವು ಆಕ್ರೋಶ ಇದೆಯಾದರೂ, ಜನರ ಭಾವನೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ಬಗ್ಗೆ ಚಂಪಾ ಮಾತುಗಳಲ್ಲಿ ಎಚ್ಚರಿಕೆ ವ್ಯಕ್ತವಾಗಿತ್ತು. ವರ್ಷಾಂತರಗಳ ಪ್ರಯತ್ನದಲ್ಲಿ ಕೈಗೂಡಿರುವ ಕರ್ನಾಟಕವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕಾರಣಿಗಳು ಮುತ್ಸದ್ದಿತನ ತೋರಬೇಕೆಂಬ ಅಪೇಕ್ಷೆ ಅವರದಾಗಿತ್ತು.

Similar News