2012ರಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಸಂಸದೆ ರೀಟಾ ಬಹುಗುಣ ಸಹಿತ ನಾಲ್ವರು ತಪ್ಪಿತಸ್ಥರು

Update: 2022-11-05 07:52 GMT

ಹೊಸದಿಲ್ಲಿ: 2012 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಹಾಗೂ ಇತರ ನಾಲ್ವರು ತಪ್ಪಿತಸ್ಥರು ಎಂದು ಉತ್ತರ ಪ್ರದೇಶದ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಜೋಶಿ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಾಗಿತ್ತು. ಪ್ರಚಾರದ ಗಡುವು ಮುಗಿದ ನಂತರವೂ ಬಜರಂಜ್ ನಗರ ಮೊಹಲ್ಲಾದಲ್ಲಿ ರ್ಯಾಲಿ ನಡೆಸಿದ ಆರೋಪ ಜೋಶಿ ಮೇಲಿತ್ತು.

ಜೋಶಿ ಅವರು ಧ್ವನಿವರ್ಧಕಗಳನ್ನು ಹೊಂದಿರುವ ಹಲವು ವಾಹನಗಳನ್ನು ಬಳಸುತ್ತಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಜೋಶಿ ಪ್ರಸ್ತುತ ಅಲಹಾಬಾದ್‌ನ ಬಿಜೆಪಿ ಸಂಸದರಾಗಿದ್ದಾರೆ.

Similar News