ಗುಜರಾತ್ ಚುನಾವಣೆ: ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದ ದೋಷಿಯ ಪುತ್ರಿಗೆ ಬಿಜೆಪಿ ಟಿಕೆಟ್ !

Update: 2022-11-11 06:57 GMT

ಅಹ್ಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಸ್ಫರ್ಧಿಸಲು ಬಿಜೆಪಿಯು (BJP) ಒಟ್ಟು ಹದಿನಾಲ್ಕು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅದರಲ್ಲಿ ನರೋಡಾ ಪಾಟಿಯಾ (Naroda Patia) ಹತ್ಯಾಕಾಂಡಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೊಳಗಾಗಿರುವ ದೋಷಿಯೋರ್ವನ ಪುತ್ರಿಯೂ ಸೇರಿದ್ದಾಳೆ ಎಂದು timesofindia ವರದಿ ಮಾಡಿದೆ.

ನರೋಡಾ ವಿಧಾನಸಭಾ ಕ್ಷೇತ್ರದಿಂದ 30ರ ಹರೆಯದ ಡಾ. ಪಾಯಲ್ ಕುಲಕರ್ಣಿಯವರನ್ನು ಚುನಾವಣಾ ಕಣಕ್ಕಿಳಿಸಲಾಗಿದೆ. ಪಾಯಲ್ ಆಯ್ಕೆಯು ಹಲವರ ಹುಬ್ಬೇರಿಸಿದ್ದು, ಆಕೆಯ ತಂದೆ 2002ರ ಹತ್ಯಾಕಾಂಡಕ್ಕೆ ಸಂಬಂಧಿಸಿ ಜೀವಾವಾಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 14  ಮಂದಿ ಬಿಜೆಪಿ ಮಹಿಳಾ ಅಭ್ಯರ್ಥಿಗಳ ಪೈಕಿ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಕೂಡಾ ಸೇರಿದ್ದಾರೆ.

ಇದನ್ನೂ ಓದಿ: ಜೆಎನ್ ಯು ಕ್ಯಾಂಪಸ್ ನಲ್ಲಿ ಮಾರಾಮಾರಿ ಪ್ರಕರಣ: 2 ಪ್ರತ್ಯೇಕ ಎಫ್ ಐಆರ್ ದಾಖಲಿಸಿದ ದಿಲ್ಲಿ  ಪೊಲೀಸರು

Similar News