ರಾಜೀವ್ ಹಂತಕರ ಬಿಡುಗಡೆಗೆ ಸೋನಿಯಾ ಮನವಿ ಮಾಡಿದ್ದರೂ ನಾವು ಒಪ್ಪುವುದಿಲ್ಲ: ಕಾಂಗ್ರೆಸ್

Update: 2022-11-11 16:13 GMT

ಹೊಸದಿಲ್ಲಿ, ನ. 11: ರಾಜೀವ್ ಗಾಂಧಿ (Rajiv Gandhi)ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಸುಪ್ರೀಂ ಕೋರ್ಟ್(Supreme Court) ಜೈಲಿನಿಂದ ಮುಂಚಿತವಾಗಿ ಬಿಡುಗಡೆ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ. ‘‘ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸೋನಿಯಾ ಗಾಂಧಿ (Sonia Gandhi)ಮನವಿ ಮಾಡಿರಬಹುದು, ಆದರೆ ಅವರ ನಿರ್ಧಾರವನ್ನು ಒಪ್ಪುವುದಿಲ್ಲ’’ ಎಂದು ಪಕ್ಷ ಹೇಳಿದೆ.

ಈ ವಿಷಯವನ್ನು ಕಾನೂನಿನಂತೆ ನಿಭಾಯಿಸಲಾಗುವುದು ಎಂದು ಅದು ಹೇಳಿದೆ.

‘‘ವೈಯಕ್ತಿಕ ಅಭಿಪ್ರಾಯಗಳನ್ನು ಹೊಂದುವ ಹಕ್ಕನ್ನು ಸೋನಿಯಾ ಗಾಂಧಿ ಹೊಂದಿದ್ದಾರೆ. ಆದರೆ, ಅದನ್ನು ಗೌರವಿಸುತ್ತಲೇ, ಪಕ್ಷವು ಅವರ ನಿಲುವನ್ನು ಒಪ್ಪುವುದಿಲ್ಲ ಹಾಗೂ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಈ ಪ್ರಕರಣದಲ್ಲಿ, ಕಾಂಗ್ರೆಸ್ನ ನಿಲುವು ಕೇಂದ್ರ ಸರಕಾರದ ನಿಲುವೇ ಆಗಿದೆ. ಪಕ್ಷವು ಸೋನಿಯಾ ಗಾಂಧಿಯ ನಿಲುವನ್ನು ಒಪುವುದಿಲ್ಲ. ಆ ನಿಲುವಿಗೆ ಯಾವತ್ತೂ ಒಪ್ಪಿಲ್ಲ. ಹಾಗೂ ನಮ್ಮ ನಿಲುವನ್ನು ವರ್ಷಗಳಿಂದ ಸ್ಪಷ್ಟವಾಗಿ ಹೇಳುತ್ತಾ ಬಂದಿದ್ದೇವೆ’’ ಎಂದು ಕಾಂಗ್ರೆಸ್ ವಕ್ತಾರ ಅಭಿಶೇಕ್ ಮನು ಸಿಂಘ್ವಿ ‘ಎನ್ಡಿಟಿವಿ’ಯೊಂದಿಗೆ ಮಾತನಾಡುತ್ತಾ ಹೇಳಿದರು.

ಮುಖ್ಯಾಂಶಗಳು

*ನಳಿನಿ ಶ್ರೀಹರನ್ (Nalini Sriharan)ಸೇರಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಆರೋಪಿಗಳ ಅವಧಿಪೂರ್ವ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ.

*ಎಲ್ಲಾ ಆರೋಪಿಗಳು ಜೀವಿತಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

*ಆರೋಪಿಗಳನ್ನು ಬಿಡುಗಡೆಗೊಳಿಸಲು ತಮಿಳುನಾಡು ಸರಕಾರ ಶಿಫಾರಸು ಮಾಡಿತ್ತು, ಆದರೆ ರಾಜ್ಯಪಾಲರು ಕ್ರಮ ತೆಗೆದುಕೊಂಡಿರಲಿಲ್ಲ ಎಂದ ನ್ಯಾಯಾಲಯ.

*ಆರೋಪಿಗಳು 30 ವರ್ಷಗಳಿಗಿಂತಲೂ ಹೆಚ್ಚು ಸಮಯ ಜೈಲಿನಲ್ಲಿದ್ದಾರೆ ಹಾಗೂ ಜೈಲಿನಲ್ಲಿ ಅವರ ವರ್ತನೆ ತೃಪ್ತಿಕರವಾಗಿದೆ ಎಂದ ನ್ಯಾಯಾಧೀಶರು.

*ಆರು ಅಪರಾಧಿಗಳ ಪೈಕಿ ಐವರು ಜೈಲಿನಲ್ಲಿ ಅಧ್ಯಯನನಿರತರಾಗಿದ್ದರು; ರಾಜಾ ಹಲವಾರು ಲೇಖನಗಳನ್ನು ಬರೆದಿದ್ದಾರೆ ಹಾಗೂ ಅದಕ್ಕಾಗಿ ಅವರಿಗೆ ವಿವಿಧ ಪ್ರಶಸ್ತಿಗಳು ಬಂದಿವೆ ಎಂದು ನ್ಯಾಯಾಲಯ ಹೇಳಿದೆ.

Similar News