ಸಗಟು ಹಣದುಬ್ಬರ ದರ 19 ತಿಂಗಳ ಕನಿಷ್ಠ 8.39%ಕ್ಕೆ ಇಳಿಕೆ

Update: 2022-11-14 17:10 GMT

ಹೊಸದಿಲ್ಲಿ, ನ. 14: ಸಗಟು ಬೆಲೆ ಆಧಾರಿತ ಹಣದುಬ್ಬರ (ಡಬ್ಲುಪಿಐ)ವು ಅಕ್ಟೋಬರ್‌ನಲ್ಲಿ 8.39 ಶೇಕಡಕ್ಕೆ ಇಳಿದಿದ್ದು, ಇದು 19 ತಿಂಗಳ ಕನಿಷ್ಠವಾಗಿದೆ. ಇಂಧನ ಮತ್ತು ತಯಾರಿಕಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಹಣದುಬ್ಬರದಲ್ಲೂ ಇಳಿಕೆಯಾಗಿದೆ.

ಸಗಟು ಬೆಲೆ ಆಧಾರಿತ ಹಣದುಬ್ಬರವು ಒಂದಂಕಿಗೆ ಇಳಿದಿರುವುದು 19 ತಿಂಗಳಲ್ಲಿ ಇದೇ ಮೊದಲನೆ ಬಾರಿಯಾಗಿದೆ. ಇದಕ್ಕೂ ಮೊದಲು, 2021 ಮಾರ್ಚ್‌ನಲ್ಲಿ  ಹಣದುಬ್ಬರವು 7.89% ಆಗಿತ್ತು. 2021 ಎಪ್ರಿಲ್ ಬಳಿಕ, 18 ತಿಂಗಳುಗಳ ಕಾಲ ಡಬ್ಲುಪಿಐ ಹಣದುಬ್ಬರವು ಎರಡಂಕಿಯಲ್ಲಿತ್ತು. 2021 ಸೆಪ್ಟಂಬರ್‌ನಲ್ಲಿ ಅದು 10.79% ಆಗಿದ್ದರೆ, ಅದೇ ವರ್ಷದ ಅಕ್ಟೋಬರ್‌ನಲ್ಲಿ ಅದು 13.83% ಆಗಿತ್ತು.

 ‘‘ಖನಿಜತೈಲಗಳು, ಲೋಹಗಳು, ಲೋಹ ಉತ್ಪನ್ನಗಳು, ಜವಳಿ, ಲೋಹೇತರ ಖನಿಜ ಉತ್ಪನ್ನಗಳು, ಖನಿಜಗಳು ಮುಂತಾದುವುಗಳ ಬೆಲೆಯಲ್ಲಿ ಇಳಿಕೆಯಾಗಿರು ಹಿನ್ನೆಲೆಯಲ್ಲಿ ಸಗಟು ಹಣದುಬ್ಬರಲ್ಲೂ ಇಳಿಕೆಯಾಗಿದೆ’’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಸೋಮವಾರಹೇಳಿಕೆಯೊಂದರಲ್ಲಿ ತಿಳಿಸಿದೆ.

Similar News