8 ಕೋಟಿ ರೂ. ಮೊತ್ತದ ನಕಲಿ ಕ್ಯಾನ್ಸರ್ ಔಷಧಿಗಳ ವಶ; 4 ಮಂದಿಯ ಬಂಧನ

Update: 2022-11-16 14:11 GMT

ಹೊಸದಿಲ್ಲಿ, ನ. 16: ನಕಲಿ ಕ್ಯಾನ್ಸರ್ ಔಷಧಿ(Cancer medicine)ಗಳ ತಯಾರಿಕೆಯಲ್ಲಿ ತೊಡಗಿದ್ದ ಜಾಲವೊಂದನ್ನು ದಿಲ್ಲಿ ಕ್ರೈಮ್ ಬ್ರಾಂಚ್ (Crime Branch)ಮಂಗಳವಾರ ಭೇದಿಸಿದೆ.

ಘಟನೆಗೆ ಸಂಬಂಧಿಸಿ ಇಬ್ಬರು ಇಂಜಿನಿಯರ್ಗಳು, ಓರ್ವ ವೈದ್ಯ ಮತ್ತು ಓರ್ವ ಎಮ್ಬಿಎ ಪದವೀಧರನನ್ನು ಬಂಧಿಸಲಾಗಿದೆ ಎಂದು ಕ್ರೈಮ್ ಬ್ರಾಂಚ್ ವಿಶೇಷ ಪೊಲೀಸ್ ಕಮಿಶನರ್ ಆರ್.ಎಸ್. ಯಾದವ್(R.S. Yadav) ತಿಳಿಸಿದರು. ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

‘‘ಆರೋಪಿಗಳು ನಕಲಿ ಜೀವರಕ್ಷಕ ಕ್ಯಾನ್ಸರ್ ಔಷಧಗಳ ತಯಾರಿಕೆಯಲ್ಲಿ ತೊಡಗಿದ್ದರು. ಹರ್ಯಾಣದ ಸೋನಿಪತ್ನಲ್ಲಿರುವ ಒಂದು ಔಷಧ ತಯಾರಿಕಾ ಕಾರ್ಖಾನೆ ಮತ್ತು ಘಾಝಿಯಾಬಾದ್ನಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ’’ ಎಂದು ಯಾದವ್ ಹೇಳಿದರು.

8 ಕೋಟಿ ರೂಪಾಯಿ ಮೊತ್ತದ ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಈ ಜಾಲವು ಕಳೆದ 3-4 ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ.

Similar News