ಏಶ್ಯನ್ ಟೇಬಲ್‌ ಟೆನ್ನಿಸ್: ಮಣಿಕಾ ಬಾತ್ರಾಗೆ ಐತಿಹಾಸಿಕ ಕಂಚಿನ ಪದಕ

Update: 2022-11-19 11:33 GMT

ಬ್ಯಾಂಕಾಕ್: ಥಾಯ್ಲೆಂಡ್‌ನ ಬ್ಯಾಂಕಾಕ್‌ನ ಹುವಾಮಾರ್ಕ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಟಿಟಿಎಫ್-ಎಟಿಟಿಯು ಏಷ್ಯನ್ ಕಪ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ವಿಶ್ವದ 6 ನೇ ಶ್ರೇಯಾಂಕಿತ ಜಪಾನ್‌ನ ಹಿನಾ ಹಯಾತಾ ಅವರನ್ನು ಸೋಲಿಸಿ ಕಂಚಿನ ಪದಕವನ್ನು ಪಡೆಯುವ ಮೂಲಕ ಮಣಿಕಾ ಬಾತ್ರಾ ಈ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ವಿಶ್ವದ 44ನೇ ಶ್ರೇಯಾಂಕದ ಆಟಗಾರ ಬಾತ್ರಾ 11-6, 6-11, 11-7, 12-10, 4-11, 11-2 ಸೆಟ್‌ಗಳಿಂದ ಆಟವನ್ನು ಗೆದ್ದುಕೊಂಡಿದ್ದಾರೆ. ಅವರು 16ನೇ ರೌಂಡ್‌ನಲ್ಲಿ ಚೀನಾದ ವಿಶ್ವದ ನಂ 7ನೇ ಶ್ರೇಯಾಂಕದ ಕ್ಸಿಂಗ್‌ಟಾಂಗ್ ಚೆನ್ ವಿರುದ್ಧ 4-3 ಅಂತರದ ಜಯಿಸಿದ್ದು, ನಂತರ ವಿಶ್ವದ ನಂ 23 ಶ್ರೇಯಾಂಕದ ಸ್ಜು-ಯು ಚೆನ್ ಅವರನ್ನು 4-3 ಅಂತರದಿಂದ ಸೋಲಿಸಿದ್ದರು. ಆದರೆ, ಸೆಮಿಫೈನಲ್‌ನಲ್ಲಿ ವಿಶ್ವದ 5 ನೇ ಶ್ರೇಯಾಂಕದ ಜಪಾನ್‌ನ ಮಿಮಾ ಇಟೊ ಅವರನ್ನು ಎದುರಿಸಿದ್ದ ಬಾತ್ರಾ, 4-2 ರಿಂದ ಸೋಲು ಅನಿಭವಿಸಿದ್ದಾರೆ.

Similar News