EWS ಗೆ ಶೇ.10 ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ DMK

Update: 2022-12-05 14:55 GMT

ಹೊಸದಿಲ್ಲಿ, ಡಿ. 5:  ಮೇಲ್ಜಾತಿಯ ಆರ್ಥಿಕ ದುರ್ಬಲ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10 ಮೀಸಲಾತಿಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ನ ತೀರ್ಪಿನ ವಿರುದ್ಧ ಡಿಎಂಕೆ ಸೋಮವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ. 

ಮೇಲ್ಜಾತಿಯ ಆರ್ಥಿಕ ಹಿಂದುಳಿದ ವರ್ಗಕ್ಕೆ ಶೇ. 10 ಮೀಸಲಾತಿ ನೀಡುವ 3:4 ಭಿನ್ನ ತೀರ್ಪನ್ನು ಸುಪ್ರೀಂ ಕೋರ್ಟ್(Supreme Court) ನ  ಐವರು ಸದಸ್ಯರ ಸಾಂವಿಧಾನಿಕ ನ್ಯಾಯ ಪೀಠ ನವೆಂಬರ್ 7ರಂದು ಎತ್ತಿ ಹಿಡಿದಿತ್ತು. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ(Dinesh Maheshwari), ಬೇಲಾ ತ್ರಿವೇದಿ (Bela Trivedi)ಹಾಗೂ ಜೆ.ಬಿ. ಪರ್ದಿವಾಲ್ (JB Pardiwal)ಈ ಮೀಸಲಾತಿಯನ್ನು ಎತ್ತಿ ಹಿಡಿದರೆ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್(U.U. Lalit) ಹಾಗೂ ನ್ಯಾಯಮೂರ್ತಿ ರಬೀಂದ್ರ ಭಟ್(Rabindra Bhatt) ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ (M.K. Stalin)ನವೆಂಬರ್  12ರಂದು ಆಯೋಜಿಸಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. 

ಸೋಮವಾರ ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯಲ್ಲಿ ಡಿಎಂಕೆ, ಕೇಂದ್ರ ಸರಕಾರದ ಕ್ರಮ ಮೇಲ್ಜಾತಿಯ ಜಸಂಖ್ಯೆಯ ದೊಡ್ಡ ವರ್ಗ ‘‘ಸುಲಭವಾದ ವಿಶೇಷ ಐಷಾರಾಮಿ ಮೀಸಲಾತಿ’’ಗೆ ಅರ್ಹವಾಗುವಂತೆ ಮಾಡುತ್ತದೆ ಎಂದು ಹೇಳಿದೆ.

‘‘ಆರ್ಥಿಕ ದುರ್ಬಲ ವರ್ಗ’’ ಎಂಬ ದಾರಿ ತಪ್ಪಿಸುವ ಪದದ ಹಿಂದೆ ಅಡಗಲು ಸಂವಿಧಾನ ಅವರಿಗೆ ಅವಕಾಶ ನೀಡಿದೆ ಎಂದು ಡಿಎಂಕೆ ಮರು ಪರಿಶೀಲನಾ ಅರ್ಜಿಯಲ್ಲಿ ಡಿಎಂಕೆ ಹೇಳಿದೆ.

ಅವರು ಸಾಮಾಜಿಕ ಕಳಂಕ ಅಥವಾ ತಾರತಮ್ಯವನ್ನು ಅನುಭವಿಸಿಲ್ಲ,  ಅವರನ್ನು ಮುಖ್ಯವಾಹಿನಿಯಿಂದ ಅಥವಾ ಉದ್ಯೋಗದಿಂದ ದೂರ ಇಟ್ಟಿಲ್ಲ ಎಂಬುದು ಸತ್ಯ ಎಂದು ಮರು ಪರಿಶೀಲನಾ ಅರ್ಜಿಯಲ್ಲಿ  ಹೇಳಲಾಗಿದೆ.

ಮೆಲ್ಜಾತಿಯ ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳನ್ನು ಹೊರಗಿಡುವ ಮೂಲಕ ನ್ಯಾಯಾಲಯ ಹೊರಗಿಡುವಿಕೆ ಹಾಗೂ ತಾರತಮ್ಯಕ್ಕೆ ಅನುಮತಿ ನೀಡಿದೆ.

ಡಿಎಂಕೆಯ ಪುನರ್ ಪರಿಶೀಲನಾ ಮನವಿ. 

Similar News