ಚಲಿಸುತ್ತಿದ್ದ ಬಸ್ಸಿನಡಿ ಧುಮುಕಿ ವ್ಯಕ್ತಿ ಮೃತ್ಯು, ವೀಡಿಯೊ ವೈರಲ್

Update: 2022-12-13 10:14 GMT

ಮುಂಬೈ: ಅಂಧೇರಿ ಪಶ್ಚಿಮದಲ್ಲಿ ಚಲಿಸುತ್ತಿದ್ದ ಬಸ್ಸಿನಡಿ ಧುಮುಕಿ 59 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕ್ಯಾಮರಾದಲ್ಲಿ ದಾಖಲಾಗಿರುವ ಘಟನೆಯಲ್ಲಿ ಬಸ್ಸಿನ ಹಿಂಬದಿಯ ಚಕ್ರಗಳು ವ್ಯಕ್ತಿಯ  ಸೊಂಟದ ಮೇಲೆ ಹರಿದಿರುವುದು ಕಂಡುಬಂದಿದೆ.

ಡಿಸೆಂಬರ್ 6ರಂದು ನಡೆದಿರುವ ಘಟನೆಯ ವೀಡಿಯೊ  ಪೊಲೀಸರ ಗಮನಕ್ಕೆ ಬರುವ ಮುನ್ನವೇ ಅಂತರ್ಜಾಲದಲ್ಲಿ ಹರಿದಾಡಿತ್ತು.

ಅಂಧೇರಿ ಪಶ್ಚಿಮದ ಡಿಎನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಲ್ಲಿ  ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು  ಅಬ್ದುಲ್ ಗಫಾರ್ ಇಸ್ಮಾಯಿಲ್ ಸಯ್ಯದ್ (59 ವರ್ಷ) ಎಂದು ಪೊಲೀಸರು ಗುರುತಿಸಿದ್ದಾರೆ. ಸಯ್ಯದ್ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News