'ಪಠಾಣ್' ಚಿತ್ರದ ಹಾಡಿನ ವಿವಾದ; ಶಾರೂಖ್, ದೀಪಿಕಾ ವಿರುದ್ಧ FIR ದಾಖಲಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

Update: 2022-12-17 07:32 GMT

ಮುಝಫ್ಫರ್‌ಪುರ್: ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವ ಶಾರೂಖ್ ಖಾನ್‌ (Shah Rukh Khan), ದೀಪಿಕಾ ಪಡುಕೋಣೆ
(Deepika Padukone) ಹಾಗೂ ಜಾನ್‌ ಅಬ್ರಹಂ (John Abraham) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಪಠಾಣ್' ಚಿತ್ರದಲ್ಲಿನ ಹಾಡೊಂದರಲ್ಲಿ "ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ" ಎಂಬ ಆರೋಪದಡಿ ನಟ ಶಾರುಖ್‌ ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಕೋರಿ ಮುಝಫ್ಫರಪುರ್‌ ಮೂಲದ ವಕೀಲ ಸುಧೀರ್‌ ಓಝಾ ಎಂಬವರು  ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ಈ ಪ್ರಕರಣದ ವಿಚಾರಣೆ ಜನವರಿ 3 ರಂದು ನಡೆಯಲಿದೆ.

ಪಠಾಣ್‌ ಚಿತ್ರದ ʼಬೇಷರಮ್‌ ರಂಗ್‌ʼ ಹಾಡು ಆಕ್ಷೇಪಾರ್ಹವಾಗಿದೆ ಹಾಗೂ ಹಿಂದು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಅರ್ಜಿದಾರ ಓಝಾ ಹೇಳಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ 'ಪಠಾಣ್'ಗೆ ಬಹಿಷ್ಕಾರ: ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಶಾರುಖ್‌ ಖಾನ್‌

Similar News