ಪತ್ನಿಯೊಂದಿಗೆ ಜಗಳವಾಡಿದ ನಂತರ ಮಗನನ್ನು ಬಾಲ್ಕನಿಯಿಂದ ಎಸೆದು ತಾನೂ ಜಿಗಿದ ವ್ಯಕ್ತಿ!
Update: 2022-12-17 07:23 GMT
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ ತನ್ನ ಎರಡು ವರ್ಷದ ಮಗನನ್ನು ಮೂರಂಸ್ತಿನ ಮನೆಯ ಬಾಲ್ಕನಿಯಿಂದ ಕೆಳಗೆ ಎಸೆದು ತಾನೂ ಕೆಳಗೆ ಜಿಗದಿರುವ ಘಟನೆ ವರದಿಯಾಗಿದೆ.
ತಂದೆ ಹಾಗೂ ಮಗನನ್ನು ಗಂಭೀರ ಗಾಯಗೊಂಡಿರುವ ಸ್ಥಿತಿಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾನ್ ಸಿಂಗ್ ಹಾಗೂ ಆತನ ಪತ್ನಿ ಪೂಜಾ ನಡುವೆ ಕಳೆದ ಕೆಲವು ತಿಂಗಳುಗಳಿಂದ ಜಗಳ ನಡೆಯುತ್ತಲ್ಲೇ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಜಾ ತನ್ನ ಮನೆಯನ್ನು ಬಿಟ್ಟು ತನ್ನ ಅಜ್ಜಿಯ ಮನೆಗೆ ತನ್ನ ಇಬ್ಬರು ಮಕ್ಕಳೊಂದಿಗೆ ಬಂದಿದ್ದಳು. ಅಲ್ಲಿಗೆ ಕಳೆದ ರಾತ್ರಿ ಪೂಜಾಳನ್ನು ಭೇಟಿಯಾಗಲು ಬಂದ ಮಾನ್ ಸಿಂಗ್ ಕೋಪದ ಭರದಲ್ಲಿ ತನ್ನ ಮಗನನ್ನು ಬಾಲ್ಕನಿಯಿಂದ ಎಸೆದು, ತಾನೂ ಜಿಗಿದಿದ್ದಾನೆ ಎಂದು ವರದಿಯಾಗಿದೆ.
ವ್ಯಕ್ತಿಯ ವಿರುದ್ಧ ಹತ್ಯೆಗೆ ಯತ್ನ ಕೇಸನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.