ಕಳೆದ 4 ವರ್ಷಗಳಲ್ಲಿ 312 ಆರ್ಟಿಎಂ ಸಿಬ್ಬಂದಿ ರೈಲು ಢಿಕ್ಕಿಯಾಗಿ ಸಾವು

Update: 2022-12-18 17:45 GMT

ಹೊಸದಿಲ್ಲಿ:  ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ರೈಲ್ವೆಯ 300 ಕ್ಕೂ ಅಧಿಕ ರೈಲ್ವೆ ಹಳಿ ನಿರ್ವಹಣಾ  (ಆರ್ಟಿಎಂ) ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದ ಹಲವು ರೈಲ್ವೆ ವಿಭಾಗಗಳಲ್ಲಿ 2018 ರಿಂದ 2022 ಡಿಸೆಂಬರ್ 5 ರ ವರೆಗೆ ಅತ್ಯಧಿಕ ಆರ್ಟಿಎಂ ಸಿಬ್ಬಂದಿ ಕರ್ತವ್ಯ ನಿರ್ವಹಣೆಯ ಸಂದರ್ಭ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. 

ಕಳೆದ ನಾಲ್ಕು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 312 ರೈಲ್ವೇ  ಹಳಿ ನಿರ್ವಹಣಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರೈಲ್ವೆ ಲೋಕಸಭೆಗೆ ಮಾಹಿತಿ ನೀಡಿತು. ಶುಕ್ರವಾರ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ರೈಲು ಢಿಕ್ಕಿಯಾಗಿ ಮೃತಪಟ್ಟ ರೈಲ್ವೇ ಹಳಿ ನಿರ್ವಹಣಾ ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ಧನ ನೀಡಲಾಗಿದೆ ಎಂದು ತಿಳಿಸಿದರು.

Similar News