ಬಿಹಾರವನ್ನು ಅವಮಾನಿಸುವ ಉದ್ದೇಶವಿರಲಿಲ್ಲ: ವಿವಾದದ ಬಳಿಕ ತನ್ನ ಹೇಳಿಕೆ ಹಿಂಪಡೆದ ಸಚಿವ ಪಿಯೂಶ್‌ ಗೋಯಲ್

Update: 2022-12-22 08:14 GMT

ಹೊಸದಿಲ್ಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ರವರು ಬಿಹಾರದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಅವರ ಹೇಳಿಕೆಯು ಬಿಹಾರದ ಸಂಸದರಿಂದ ಸಂಸತ್ತಿನಲ್ಲಿ ಪ್ರತಿಭಟನೆಯನ್ನು ಕಾರಣವಾಗಿದ್ದು, ಸಚಿವರು ಕ್ಷಮೆ ಯಾಚಿಸಬೇಕೆಂದು ಅವರು ಒತ್ತಾಯಿಸಿದ್ದರು.

ಮಂಗಳವಾರ ರಾಜ್ಯಸಭೆಯಲ್ಲಿ ಹಣದುಬ್ಬರ ಕುರಿತು ಆರ್‌ಜೆಡಿ ಸದಸ್ಯ ಮನೋಜ್ ಝಾ ಮಾತನಾಡುತ್ತಿದ್ದಾಗ ಸಚಿವರು ಈ ಹೇಳಿಕೆ ನೀಡಿದ್ದರು.

ಝಾ ಅವರ ಮಾತಿಗೆ ಅಡ್ಡಿಪಡಿಸಿದ ಪಿಯೂಷ್ ಗೋಯಲ್, "ಇಂಕಾ ಬಸ್ ಚಲೇ ತೋ ದೇಶ್ ಕೋ ಬಿಹಾರ್ ಬನಾ ದೇ (ಅವರ ದಾರಿಯಿದ್ದರೆ, ಅವರು ಇಡೀ ದೇಶವನ್ನು ಬಿಹಾರವಾಗಿ ಪರಿವರ್ತಿಸುತ್ತಾರೆ)" ಎಂದು ಹೇಳಿದ್ದರು.

ಈ ಹೇಳಿಕೆಗೆ ಝಾ ತಕ್ಷಣವೇ ಪ್ರತಿಭಟಿಸಿದರು. "ಸರ್, ಇದು ಬಿಹಾರಕ್ಕೆ ಮಾಡಿದ ಅವಮಾನ. ಪಿಯೂಷ್ ಜೀ, ಕೈ ಜೋಡಿಸಿ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ, ನನ್ನ ಬಗ್ಗೆ ನೀವು ಏನು ಬೇಕಾದರೂ ಹೇಳಿ, ಆದರೆ ಬಿಹಾರದ ಬಗ್ಗೆ ಪ್ರತಿಕ್ರಿಯಿಸಬೇಡಿ," ಎಂದು ಅವರು ಹೇಳಿದರು.

ಇಂದು ಬೆಳಿಗ್ಗೆ, ಬಿಹಾರ ಸಂಸದರು ಕ್ಷಮೆಯಾಚಿಸಲು ಒತ್ತಾಯಿಸುತ್ತಿದ್ದಂತೆ ಪಿಯೂಷ್ ಗೋಯಲ್ ಸ್ಪಷ್ಟೀಕರಣವನ್ನು ನೀಡಿದರು.

"ಬಿಹಾರ ಅಥವಾ ಬಿಹಾರದ ಜನರನ್ನು ಅವಮಾನಿಸುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಯಾರಿಗಾದರೂ ಭಾವನೆಗೆ ಧಕ್ಕೆಯುಂಟುಮಾಡಿದ್ದರೆ, ತಕ್ಷಣವೇ ನಾನು ಆ ಹೇಳಿಕೆಯನ್ನು ಹಿಂಪಡೆಯುತ್ತೇನೆ" ಎಂದು ಸಚಿವರು ರಾಜ್ಯಸಭೆಯಲ್ಲಿ ಹೇಳಿದರು.ಬಿಹಾರದ ಸಂಸದರು ಗೋಯಲ್ ತಮ್ಮ ರಾಜ್ಯವನ್ನು ಅವಹೇಳನಕಾರಿ ಪದವಾಗಿ ಬಳಸುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು.

Similar News