ಬಹುರಾಷ್ಟ್ರೀಯ ಕಂಪನಿಗಳು ಭಾರತದಿಂದ ಕಾಲ್ಕೀಳುತ್ತಿರುವುದೇಕೆ?: ಇಲ್ಲಿದೆ ಮಾಹಿತಿ

Update: 2022-12-23 03:29 GMT

ಮುಂಬೈ: ಹೆಲಿಕಾಂ, ಫೋರ್ಡ್, ಕೈರ್ನ್, ಡೈಚಿ ಸ್ಯಾಂಕೊ, ಇದೀಗ ಮೆಟ್ರೊ (Holcim. Ford. Cairn. Daiichi Sankyo. Metro). ಕಳೆದ ಒಂದು ದಶಕದಲ್ಲಿ ಭಾರತದಿಂದ ಕಾಲ್ಕಿತ್ತ ಅಥವಾ ತಮ್ಮ ವಹಿವಾಟನ್ನು ಸೀಮಿತಗೊಳಿಸಿರುವ ಕೆಲ ಬಹುರಾಷ್ಟ್ರೀಯ ಕಂಪನಿಗಳ ಪಟ್ಟಿ ಇದು. ಸ್ಥಳೀಯ ಪೈಪೋಟಿ, ಜಾಗತಿಕ ಮಾರುಕಟ್ಟೆ ಆದ್ಯತೆ ಬದಲು, ಹೊಸ ವಹಿವಾಟು ಮಾದರಿ, ಕ್ರೋಢೀಕೃತ ಸಾಲ ಮತ್ತಿತರ ಅಂಶಗಳು ಇಂಥ ಬಹುರಾಷ್ಟ್ರೀಯ ಕಂಪನಿಗಳು (MNC) ಭಾರತದಿಂದ ಹೊರಹೋಗಲು ಪ್ರಮುಖ ಕಾರಣಗಳಾಗಿವೆ ಎಂದು timesofindia.com ವರದಿ ಮಾಡಿದೆ.

ಜರ್ಮನಿಯ ಸಗಟು ಮಾರಾಟ ಸಂಸ್ಥೆಯಾದ ಮೆಟ್ರೊ 19 ವರ್ಷ ಹಿಂದೆ ದೊಡ್ಡ ನಿರೀಕ್ಷೆಯೊಂದಿಗೆ ಭಾರತಕ್ಕೆ ಪ್ರವೇಶಿಸಿತ್ತು. ಆದರೆ ಇದೀಗ ಸ್ಥಳೀಯ ವಹಿವಾಟನ್ನು ರಿಲಯನ್ಸ್ ಇಂಡಸ್ಟ್ರೀಸ್‌ಗೆ ಮಾರಾಟ ಮಾಡಿದೆ.

"ಹಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆ ತೀವ್ರ ಬದಲಾವಣೆ ಕಾಣುತ್ತಿದೆ. ವಹಿವಾಟು ಕ್ರೋಢೀಕರಣ ಮತ್ತು ಡಿಜಿಟಲೀಕರಣ ಸಗಟು ವಹಿವಾಟಿನಲ್ಲೂ ನಡೆಯುತ್ತಿದೆ. ಇಂಥ ಸಕ್ರಿಯ ಬೆಳವಣಿಗೆಗಳ ಜತೆ ಸಾಗಲು ಮತ್ತು ಕಂಪನಿಯ ಪ್ರಗತಿಗೆ ಮತ್ತಷ್ಟು ಚಾಲನೆ ನೀಡಲು ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯ" ಎಂದು ಕಂಪನಿ ಹೇಳಿದೆ.

"ನಾವು ಭಾರತದಲ್ಲಿ ಹೊಸ ಅಧ್ಯಾಯ ತೆರೆಯುವ ಪರ್ಯಾಯವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಭಾರತಕ್ಕೆ ಧೀರ್ಘಕಾಲದ ಆರ್ಥಿಕ ಮತ್ತು ತಂತ್ರಜ್ಞಾನದ ಅವಕಾಶಗಳನ್ನು ನೀಡಬಲ್ಲ ಪ್ರಬಲ ಪಾಲುದಾರರಿಗೆ ಮೆಟ್ರೊವನ್ನು ಹಸ್ತಾಂತರಿಸುತ್ತಿದ್ದೇವೆ" ಎಂದು ಜಾಗತಿಕ ಸಿಇಓ ಸ್ಟೀಫನ್ ಗ್ರ್ಯೂಬೆಲ್ ಉದ್ಯೋಗಿಗಳಿಗೆ ನೀಡಿದ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಫ್ರಾನ್ಸ್ ನ ಕೇರ್‌ಫೋರ್ ತನ್ನ ಸಗಟು ಮಳಿಗೆಗಳನ್ನು ಭಾರತದಲ್ಲಿ ಮುಚ್ಚಿತ್ತು. ಬಿ2ಬಿ ವಲಯದದಲ್ಲಿ ಲಾಭಾಂಶ ವಹಿವಾಟು ಕಡಿಮೆಯಾಗಿರುವುದು ಇದಕ್ಕೆ ಕಾರಣ ಎನ್ನುವುದು ವಿಶ್ಲೇಷಕರ ಅಭಿಮತ. ಕೇರ್‌ಫೋರ್, ವಾಲ್‌ಮಾರ್ಟ್, ಇದೀಗ ಮೆಟ್ರೊ ಭಿನ್ನ ಕಾರಣಗಳಿಗಾಗಿ ನಿರ್ಗಮಿಸಿವೆ ಎಂದು ವರದಿಯಾಗಿದೆ.

Similar News