ಡಿಎಪಿಯಿಂದ ಮೂವರು ನಾಯಕರನ್ನು ಉಚ್ಛಾಟಿಸಿದ ಗುಲಾಂ ನಬಿ ಆಝಾದ್‌

Update: 2022-12-23 15:14 GMT

ಶ್ರೀನಗರ, ಡಿ. 23: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಗುಲಾಂ ನಬಿ ಆಝಾದ್(Ghulam Nabi Azad) ಅವರು ತಾನು ಇತ್ತೀಚೆಗೆ ಆರಂಭಿಸಿದ ನೂತನ  ಡೆಮಾಕ್ರೆಟಿಕ್ ಅಝಾದ್ ಪಕ್ಷದಿಂದ ಮೂವರು ಉನ್ನತ ನಾಯಕರನ್ನು ಗುರುವಾರ ಉಚ್ಛಾಟಿಸಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಝಾದ್ ಅವರು ಕಾಂಗ್ರೆಸ್ ಗೆ ಆಗಸ್ಟ್ ನಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಸೆಪ್ಟಂಬರ್ 26ರಂದು  ಹೊಸ ಪಕ್ಷವನ್ನು ಆರಂಭಿಸಿದ್ದರು. ಪಕ್ಷ ಆರಂಭಿಸಿದ ಕೇವಲ ಮೂರು ತಿಂಗಳಲ್ಲೇ ಅವರು ನಾಯಕರಾದ ತಾರಾ ಚಂದ್, ಮನೋಹರ್ ಲಾಲ್ ಹಾಗೂ ಬಲ್ವಾನ್ ಸಿಂಗ್ರನ್ನು ಉಚ್ಛಾಟಿಸಿದ್ದಾರೆ. 

‘‘ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಪಕ್ಷಕ್ಕೆ ಅವರ ಅಗತ್ಯ ಇಲ್ಲ ಎಂದು ಅಧ್ಯಕ (ಗುಲಾಂ ನಬಿ ಆಝಾದ್)ರಿಗೆ  ಅರಿವಾಗಿದೆ’’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಚಿಬ್ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಗೆ ಆಗಸ್ಟ್ ನಲ್ಲಿ ರಾಜೀನಾಮೆ ನೀಡಿ ಆಝಾದ್ ಅವರ ನೂತನ ಪಕ್ಷಕ್ಕೆ ಸೇರಿದ 64 ಕಾಂಗ್ರೆಸ್ ಸದಸ್ಯರಲ್ಲಿ ಗುರುವಾರ ಉಚ್ಛಾಟನೆಗೊಂಡ ಈ ಮೂವರು ನಾಯಕರು ಕೂಡ ಸೇರಿದ್ದಾರೆ. ಗುಲಾಂ ನಬಿ ಆಝಾದ್ ಅವರಿಗೆ ಬೆಂಬಲಿಸಿದ ಮೊದಲ ಹಿರಿಯ ನಾಯಕ ತಾರಾ ಚಂದ್. 

Similar News