ಮಧ್ಯಪ್ರದೇಶ: ಸಮವಸ್ತ್ರ ತೆಗೆದು ರಸ್ತೆಯಲ್ಲಿ ರಂಪಾಟ ನಡೆಸಿದ ಪೊಲೀಸ್ ಪೇದೆ ಅಮಾನತು

Update: 2022-12-24 06:48 GMT

ಹರ್ದಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬ ತನ್ನ ಸಮವಸ್ತ್ರವನ್ನು ತೆಗೆದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದವರ ಕಡೆಗೆ ಎಸೆದು ರಂಪಾಟ ನಡೆಸುತ್ತಿರುವ  ವೀಡಿಯೊ ವೈರಲ್ ಆದ ನಂತರ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಶೀಲ್ ಮಾಂಡವಿ ಎಂದು ಗುರುತಿಸಲಾದ ಕಾನ್‌ಸ್ಟೇಬಲ್ ನ  ಕೃತ್ಯದ ವೀಡಿಯೊ ಹೊರಬಂದ ನಂತರ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ಹರ್ದಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನೀಶ್ ಕುಮಾರ್ ಅಗರವಾಲ್ ಹೇಳಿದ್ದಾರೆ.

ಹರ್ದಾ ಪಟ್ಟಣದ ರಸ್ತೆಯೊಂದರಲ್ಲಿ ಪಾನಮತ್ತನಾಗಿದ್ದ ಪೊಲೀಸ್ ಪೇದೆ ಹಾಗೂ  ಶರ್ಟ್‌ ರಹಿತ ವ್ಯಕ್ತಿಯೊಬ್ಬ ತಮ್ಮ ಸುತ್ತಲಿನ ಜನರೊಂದಿಗೆ ಜಗಳವಾಡುತ್ತಿರುವುದು  ವೀಡಿಯೊದಲ್ಲಿಕಂಡುಬಂದಿದೆ. ಅವರ ಜಗಳದ ಸಮಯದಲ್ಲಿ, ಕಾನ್‌ಸ್ಟೇಬಲ್ ರಸ್ತೆಯ ಮೇಲೆ ಕುಳಿತು ತನ್ನ ಸಮವಸ್ತ್ರವನ್ನು ತೆಗೆಯುತ್ತಿರುವುದು ಕಂಡುಬಂದಿದೆ.

ಆರಂಭದಲ್ಲಿ, ಪೊಲೀಸ್ ಪೇದೆ  ತನ್ನ ಅಂಗಿಯನ್ನು ತೆಗೆದು ನೋಡುಗರ ಕಡೆಗೆ ಎಸೆದ. ಆ ನಂತರ ತನ್ನ ಪ್ಯಾಂಟ್‌ಗಳನ್ನು ಕೂಡ ತೆಗೆದು ಆ ವ್ಯಕ್ತಿಯೊಂದಿಗೆ ವಾದವನ್ನು ಮುಂದುವರಿಸಿದ್ದಾನೆ.

Similar News