ಒಂದೇ ದಿನ ಪ್ಯಾರಾಗ್ಲೈಡಿಂಗ್ ದುರಂತಗಳಲ್ಲಿ ಕೊರಿಯಾ ಪ್ರಜೆ ಸಹಿತ ಇಬ್ಬರು ಮೃತ್ಯು

Update: 2022-12-26 08:19 GMT

ಹೊಸದಿಲ್ಲಿ: ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ಯಾರಾಗ್ಲೈಡಿಂಗ್ ದುರಂತಗಳಲ್ಲಿ ದಕ್ಷಿಣ ಕೊರಿಯಾದ ಪ್ರಜೆ ಸಹಿತ ಇಬ್ಬರು ಸಾವನ್ನಪ್ಪಿದ್ದಾರೆ.

 ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ 50 ಅಡಿಗಳಷ್ಟು ಎತ್ತರದಿಂದ ನೆಲಕ್ಕೆ ಬಿದ್ದು 50 ವರ್ಷದ ದಕ್ಷಿಣ ಕೊರಿಯಾದ ವ್ಯಕ್ತಿ ಸಾವನ್ನಪ್ಪಿದರೆ, ಮಹಾರಾಷ್ಟ್ರದ 30 ವರ್ಷದ ಪ್ರವಾಸಿಗರು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ದೋಭಿ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಬಿದ್ದು ಸಾವನ್ನಪ್ಪಿದ್ದಾರೆ ಎಂದು  ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಎರಡೂ ಅಪಘಾತಗಳು ಶನಿವಾರ ವರದಿಯಾಗಿದೆ.

ಕೊರಿಯನ್ ವ್ಯಕ್ತಿ, ಶಿನ್ ಬೈಯಾಂಗ್ ಮೂನ್, ತನ್ನ ಪ್ಯಾರಾಗ್ಲೈಡರ್‌ನ ಮೇಲಾವರಣವು ಸರಿಯಾಗಿ ತೆರೆಯಲು ವಿಫಲವಾದ ನಂತರ ಸಮತೋಲನವನ್ನು ಕಳೆದುಕೊಂಡು ಸುಮಾರು 50 ಅಡಿ ಎತ್ತರದಿಂದ ಬಿದ್ದು ಮೃತಪಟ್ಟರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಶಿರ್ವಾಲ್ ಗ್ರಾಮದ ಸೂರಜ್ ಸಂಜಯ್ ಶಾ (30) ನೂರಾರು ಅಡಿ ಕೆಳಗೆ ಬಿದ್ದಿದ್ದಾರೆ. 

Similar News